Sunday, October 27, 2024

ಲೋಕ ಸಮರದ ಫಟಾಫಟ್​ ಫಲಿತಾಂಶ – ಲೈವ್ ಅಪ್​​​ಡೇಟ್ಸ್​

                                          ಜನಾದೇಶ-2019
17ನೇ ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬೀಳೋ ಸಮಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೇ? ಅಥವಾ ಮಹಾ ಘಟಬಂಧನ ಯಶಸ್ವಿಯಾಗುತ್ತದೆಯೇ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಫಲಿತಾಂಶಕ್ಕೆ ನಾವು-ನೀವೆಲ್ಲಾ ಕಾತುರದಿಂದ ಕಾಯ್ತಾ ಇದ್ದೇವೆ. 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದು, ಅದರ ಕ್ಷಣ ಕ್ಷಣದ ಅಪ್​ಡೇಟ್ಸ್ ಇಲ್ಲಿದೆ.

https://www.facebook.com/powertvnews/videos/3323232481035863/?eid=ARAHCM0kW7L6U804gaOLPRoaWWtkjcL2BTykToxrkvqkfbHh5Q2rvJTT2Eb2VMberc0lfxQgcWxA4SSc

                            ಲೋಕಸಭಾ ಚುನಾವಣೆ ಫಲಿತಾಂಶ-2019
ಪಕ್ಷ                            ಗೆಲುವು                         
NDA                       392

UPA                       092

OTH                      097

 

ಕರ್ನಾಟಕ (ಒಟ್ಟು 28 ಕ್ಷೇತ್ರಗಳು)

*ಕರ್ನಾಟಕದಲ್ಲಿ ಮೊದಲ ಗೆಲುವು ಬಿಜೆಪಿ ಕೈ ಸೇರಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್​ ಕುಮಾರ್ ಹೆಗಡೆಯವರು ಜೆಡಿಎಸ್​ನ ಆನಂದ್​ ಆಸ್ನೋಟಿಕರ್​ ಅವರ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.

*ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಜೆಡಿಎಸ್​ನ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

*ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಜೆಡಿಎಸ್​ನ ಮಧುಬಂಗಾರಪ್ಪ ಅವರ ವಿರುದ್ಧ ಗೆಲುವು ಪಡೆದಿದ್ದಾರೆ.

*ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಕಾಂಗ್ರೆಸ್​ನ ಬಿ.ಕೆ ಹರಿಪ್ರಸಾದ್ ಅವರ ವಿರುದ್ಧ ಗೆಲುವು. ಮೊದಲ ಬಾರಿ ಸಂಸತ್ ಪ್ರವೇಶಿಸಲಿದ್ದಾರೆ ತೇಜಸ್ವಿ ಸೂರ್ಯ.

*  ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್​.ಮುನಿಸ್ವಾಮಿ ಅವರು ಕಾಂಗ್ರೆಸ್​ನ ಕೆ.ಹೆಚ್ ಮುನಿಯಪ್ಪ ಅವರ ವಿರುದ್ಧ ಜಯಭೇರಿ ಬಾರಿಸಿದ್ದಾರೆ.

*  ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಬಿಜೆಪಿಯ ಎ. ಮಂಜು ಅವರ ವಿರುದ್ಧ ಗೆಲುವಿನ ನಗೆಬೀರಿದ್ದಾರೆ.

* ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್​ನ ಮಿಥುನ್ ರೈ  ವಿರುದ್ಧ ಗೆಲುವು.

*  ಧಾರವಾಡದಲ್ಲಿ ಬಿಜೆಪಿಯ ಪ್ರಹ್ಲಾದ್​ ಜೋಷಿ ಅವರಿಗೆ ಕಾಂಗ್ರೆಸ್​ನ ವಿನಯ್ ಕುಲಕರ್ಣಿ ಅವರ ವಿರುದ್ಧ ಗೆಲುವು

*  ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿಗೆ ಗೆಲುವು, ಕಾಂಗ್ರೆಸ್​ನ ವಿರೂಪಾಕ್ಷಿ ಸಾಧುಣ್ಣನವರ್ ಅವರಿಗೆ ಸೋಲು

*  ಹಾವೇರಿ-ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಕಾಂಗ್ರೆಸ್​ನ ಡಿ.ಆರ್ ಪಾಟೀಲ್ ಅವರ ವಿರುದ್ಧ ಜಯ

*  ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್​ನ ಡಿ.ಕೆ ಸುರೇಶ್ ಅವರಿಗೆ ಬಿಜೆಪಿಯ ಅಶ್ವಥ್ ನಾರಾಯಣ್ ಅವರ ವಿರುದ್ಧ ಗೆಲುವು

*  ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್​​ನ ಎಂ ವೀರಪ್ಪ ಮೊಯ್ಲಿ ಅವರ ವಿರುದ್ಧ ಬಿಜೆಪಿಯ ಬಿ.ಎನ್ ಬಚ್ಚೇಗೌಡ ಅವರಿಗೆ ಗೆಲುವು

*  ವಿಜಯಪುರದಲ್ಲಿ ಬಿಜೆಪಿಯ ರಮೇಶ್ ಜಿಗಜಿಣಗಿ ಅವರಿಗೆ ಜೆಡಿಎಸ್​ನ ಸುನಿತಾ ಚೌಹಾಣ್ ಅವರ ವಿರುದ್ಧ ಜಯ

* ಚಿತ್ರದುರ್ಗದಲ್ಲಿ ಬಿಜೆಪಿಯ ಎ. ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್ ಬಿ.ಎನ್ ಚಂದ್ರಪ್ಪ ಅವರ ವಿರುದ್ಧ ಜಯ

* ತುಮಕೂರು ಮಾಜಿ ಪ್ರಧಾನಿ, ಜೆಡಿಎಸ್ ಅಭ್ಯರ್ಥಿ ಹೆಚ್.ಡಿ ದೇವೇಗೌಡರ ವಿರುದ್ಧ ಗೆಲುವು ಸಾಧಿಸಿದ ಬಿಜೆಪಿಯ ಜಿ.ಎಸ್​ ಬಸವರಾಜ್​

* ಬಳ್ಳಾರಿಯಲ್ಲಿ ಬಿಜೆಪಿಯ ವೈ.ದೇವೇಂದ್ರಪ್ಪ ಅವರಿಗೆ ಕಾಂಗ್ರೆಸ್​ನ ವಿ.ಎಸ್ ಉಗ್ರಪ್ಪ ವಿರುದ್ಧ ಗೆಲುವು

* ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಡಿ.ವಿ ಸದಾನಂದ ಗೌಡ ಅವರಿಗೆ ಕಾಂಗ್ರೆಸ್​ನ ಕೃಷ್ಣಬೈರೇಗೌಡ ಅವರ ವಿರುದ್ಧ ಗೆಲುವ

* ಕಲಬುರಗಿಯಲ್ಲಿ ಬಿಜೆಪಿಯ ಉಮೇಶ್ ಜಾಧವ್​ ಅವರಿಗೆ ಕಾಂಗ್ರೆಸ್​​ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆಲುವು 

*ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅವರಿಗೆ ಕಾಂಗ್ರೆಸ್​ನ ರಾಜಶೇಖರ್​ ಹಿಟ್ನಾಳ್​​ ಅವರ ವಿರುದ್ಧ ಗೆಲುವು 

* ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಭರ್ಜರಿ ಗೆಲುವು. ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲು 

* ಮೈಸೂರಿನಲ್ಲಿ ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಗೆಲುವು, ಕಾಂಗ್ರೆಸ್​ ಅಭ್ಯರ್ಥಿ ವಿಜಯಶಂಕರ್ ಅವರಿಗೆ ಸೋಲು

* ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್​ ಜೊಲ್ಲೆ ಅವರಿಗೆ ‘ಕೈ’ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ವಿರುದ್ಧ ಗೆಲುವು. 

* ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ಅವರು ಕಾಂಗ್ರೆಸ್​ನ ರಿಜ್ವಾನ್​ ಪಾಷ ಅವರ ವಿರುದ್ಧ ಗೆಲುವು ಪಡೆದಿದ್ದಾರೆ.

* ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ್​ ಅವರು ಕಾಂಗ್ರೆಸ್​ನ ವೀಣಾ ಕಾಶಪ್ಪನವರ್​ ವಿರುದ್ಧ ಗೆಲುವು ಸಾಧಿಸಿದ್ದಾರೆ. 

* ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್​ ಅವರಿಗೆ ಜಯ 

* ಬೀದರ್​ನಲ್ಲಿ ಬಿಜೆಪಿಯ ಭಗವಂತ್ ಖೂಬಾ ಅವರಿಗೆ ಕಾಂಗ್ರೆಸ್​ನ ಈಶ್ವರ್ ಖಂಡ್ರೆ ಅವರ ವಿರುದ್ಧ ಗೆಲುವು

*  ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ್ ನಾಯಕ್ ಅವರಿಗೆ ಕಾಂಗ್ರೆಸ್​ನ ಬಿ.ವಿ ನಾಯಕ್ ಅವರ ವಿರುದ್ಧ ಗೆಲುವು 

* ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್​​ ಅವರಿಗೆ ಕಾಂಗ್ರೆಸ್​ನ ಆರ್. ಧ್ರುವನಾರಾಯಣ್ ಅವರ ವಿರುದ್ಧ ರೋಚಕ ಗೆಲುವು

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಎನ್​ಡಿಎ ಯುಪಿಎ ಇತರೆ
ಅಂಡಮಾನ್​ ನಿಕೋಬಾರ್  0 1 0
ಆಂಧ್ರಪ್ರದೇಶ  0  0 25
ಅರುಣಾಚಲ ಪ್ರದೇಶ 2 0 0
ಅಸ್ಸಾಂ  9 3 2
ಬಿಹಾರ್  39 1  0
ಚಂಡೀಗಢ  1 0 0
ಛತ್ತೀಸ್​ಘಡ  9 2  0
ದಾದ್ರಾ ಮತ್ತು ನಗರ್ ಹಾವೇಲಿ  0  0 1
ದಿಯು ಮತ್ತು ದಮನ್  1 0 0
ಗೋವಾ  1 1 0
ಗುಜರಾತ್  26 0 0
ಹರಿಯಾಭ  10 0 0
ಹಿಮಾಚಲ ಪ್ರದೇಶ  4 0 0
ಜಮ್ಮು ಮತ್ತು ಕಾಶ್ಮೀರಾ  3 0 3
ಜಾರ್ಖಂಡ್​  12  1 1
 ಕರ್ನಾಟಕ  25 2  1
ಕೇರಳ 0  19 1
ಲಕ್ಷದ್ವೀಪ  0  1  0
ಮಧ್ಯಪ್ರದೇಶ  28 1 0
ಮಹಾರಾಷ್ಟ್ರ  41 4 2
ಮಣಿಪುರ  2 0 0
ಮೇಘಾಲಯ  0  1  1
ಮಿಜೋರಾಮ್  0  0  1
ನಾಗಲ್ಯಾಂಡ್​  0 0 1
ದೆಹಲಿ  7 0 0
ಒಡಿಶಾ  9 0 12
ಪಾಂಡಿಚರಿ  0 1 0
ಪಂಜಾಬ್​  4  8  1
ರಾಜಸ್ಥಾನ  25 0 0
ಸಿಕ್ಕಿಂ  0 0 1
ತಮಿಳುನಾಡು  1  37  0
ತೆಲಂಗಾಣ  4 3 10
ತ್ರಿಪುರ  2 0 0
ಉತ್ತರಪ್ರದೇಶ  61 3 16
ಉತ್ತರಖಂಡ  5 0 0
ಪಶ್ಚಿಮ ಬಂಗಾಳ  18 2 22

 

ಮತ ಎಣಿಕೆಗೆ ಶುರುವಾಯ್ತು ಕೌಂಟ್​ಡೌನ್…ಯಾರಿಗೆ ದೆಹಲಿ ಗದ್ದುಗೆ?

ಕರ್ನಾಟಕದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು? ಇಲ್ಲಿದೆ ಲೈವ್ ಅಪ್​ಡೇಟ್ಸ್​

RELATED ARTICLES

Related Articles

TRENDING ARTICLES