ಬೆಂಗಳೂರು: ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದಾಗ ಎಲ್ಲವೂ ಸರಿ ಇತ್ತು. ಈಗ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಸಿದ್ದರಾಮಯ್ಯ ಸರಿ ಇಲ್ಲವೇ? ಅಂತ ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.
ಶಾಸಕ ರೋಷನ್ ಬೇಗ್ ಹೇಳಿಕೆಗೆ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಎಂಪಿ ಟಿಕೆಟ್ ಸಿಕ್ಕಿಲ್ಲ ಅಂತಾ ಪಕ್ಷ ಸರಿ ಇಲ್ಲ ಅನ್ನೋದು ತಪ್ಪು. ರೋಷನ್ ಬೇಗ್ ನೀಡುತ್ತಿರುವ ಹೇಳಿಕೆಗಳು ಸರಿಯಿಲ್ಲ. ಬಿಜೆಪಿಗೆ ಹೋಗೋದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಮುಂದಿನ 2 ವರ್ಷಗಳ ಕಾಲ ಮಂತ್ರಿಯಾಗಿರುತ್ತೀನಿ. ನಂತರದ 2 ವರ್ಷ ಹ್ಯಾರಿಸ್ ಮಂತ್ರಿಯಾಗಿರುತ್ತಾರೆ” ಅಂತ ಹೇಳಿದ್ರು.
ಅಗತ್ಯವಿದ್ದಲ್ಲಿ ಬಿಜೆಪಿ ಜೊತೆ ಕೈ ಜೋಡಿಸೋಕೆ ಸಿದ್ಧವಿರೋದಾಗಿ ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ನೀಡಿರೋ ಹೇಳಿಕೆ ದೋಸ್ತಿಯಲ್ಲಿ ತಳಮಳ ಉಂಟು ಮಾಡಿದೆ.