ನವದೆಹಲಿ: ಚುನಾವಣೋತ್ತರ ಸಮೀಕ್ಷೆಗೆ ಕಾಂಗ್ರೆಸ್ ನಾಯಕರು ತಳಮಳಗೊಂಡಿದ್ದಾರೆ. ಯುಪಿಎ ಮಿತ್ರಪಕ್ಷಗಳು ಹಾಗೂ ಎನ್ಡಿಎ ವಿರೋಧಿಗಳಲ್ಲಿ ಸಮೀಕ್ಷೆ ಕಳವಳ ಮೂಡಿಸಿದೆ. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಸಭೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ. ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಎನ್ಡಿಎ ವಿರೋಧಿ ಒಕ್ಕೂಟದ ಹಲವು ಮುಖಂಡರು ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಸಭೆಯಲ್ಲಿ ಫಲಿತಾಂಶದ ಸಾಧ್ಯಾಸಾಧ್ಯತೆ ಹಾಗೂ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ನಡೆಯಲಿದೆ.