Saturday, December 21, 2024

ಮಂಡ್ಯದ ಜನರನ್ನ ವಂಚಿಸಿದ್ರಾ ರಾಕ್​ಲೈನ್ ವೆಂಕಟೇಶ್​..?

ಮಂಡ್ಯ: ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ವಿರುದ್ಧ ಸುಮಲತಾ ಅಂಬರೀಶ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ, ಅಂಬಿ ಕುಟುಂಬದ ಆಪ್ತ ರಾಕ್​ಲೈನ್ ವೆಂಕಟೇಶ್ ಅವರ ವಿರುದ್ಧ ಲೋಕಸಭಾ ಚುನಾವಣೆ ಸಂದರ್ಭ ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ.

ಸುಮಲತಾ ಚುನಾವಣೆ ಖರ್ಚನ್ನು ರಾಕ್ ಲೈನ್ ವಹಿಸಿಕೊಂಡಿದ್ದರು. ಪ್ರಚಾರಕ್ಕೆ ತಂದಿದ್ದ ವಾಹನಗಳಿಗೆ ಬಾಡಿಗೆ ಹಣ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. “ಪ್ರಚಾರ ವಾಹನದ ಬಾಡಿಗೆ ಕೊಟ್ಟಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡ್ತಿಲ್ಲ” ಅಂತ ಆರೋಪಿಸಲಾಗಿದೆ. ವಾಹನಗಳ ಬಾಡಿಗೆ ಪಡೆದಿದ್ದ ಹಣವನ್ನು ಕೊಡಿ ಎಂದು ಆಗ್ರಹಿಸಲಾಗಿದೆ. ‘ಸ್ವಾಭಿಮಾನಕ್ಕಾಗಿ ಸತ್ಯಾಗ್ರಹ’ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ರಾಕ್​ಲೈನ್​ಗೆ ಚುನಾವಣೆ ಹೊಸದು ಎಂದು ಸುಮಲತಾ ಬೆಂಬಲಿಗರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ.

RELATED ARTICLES

Related Articles

TRENDING ARTICLES