Saturday, October 26, 2024

ಇವಿಎಂನಲ್ಲಿ ಕಾರ್ಯ ನಿರ್ವಹಿಸ್ತಿಲ್ಲ ಕ್ರಮ ಸಂಖ್ಯೆ 1 – ಮತದಾನ ಸ್ಥಗಿತ

ಕಲಬುರ್ಗಿ: ಚಿಂಚೋಳಿ ಕ್ಷೇತ್ರದ ರುಕ್ತಂಪುರ ತಾಂಡಾದ ಮತಗಟ್ಟೆಯಲ್ಲಿ ಮತದಾನ ಸ್ಥಗಿತವಾಗಿದೆ. ಕಲಬುರಗಿ‌ ಜಿಲ್ಲೆ ಚಿಂಚೋಳಿ ತಾಲೂಕಿನ ರುಕ್ತಂಪುರ ತಾಂಡಾದಲ್ಲಿ ಮತಯಂತ್ರದ ಕ್ರಮಸಂಖ್ಯೆ 1 ಬಟನ್ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.

ಚಿಂಚೋಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವಿನಾಶ್ ಜಾಧವ್​ ಸ್ಪರ್ಧಿಸುತ್ತಿದ್ದು, ಅವರ ಕ್ರಮ ಸಂಖ್ಯೆ 1 ಆಗಿದೆ. ಕ್ರಮಸಂಖ್ಯೆ 1 ಕಾರ್ಯನಿರ್ವಹಿಸದ ಹಿನ್ನೆಲೆ ಮತದಾನ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಮತಯಂತ್ರದ ದುರಸ್ಥಿಯಲ್ಲಿ ತೊಡಗಿದ್ದಾರೆ.

RELATED ARTICLES

Related Articles

TRENDING ARTICLES