Friday, May 3, 2024

ಸಿಬಿಐ ಬಾಸ್ ಗೆ ತನಿಖೆ ಬಿಸಿ

ಸಿಬಿಐ ಡೈರೆಕ್ಟರ್ ಅಲೋಕ್ ಕುಮಾರ್ ವರ್ಮಾ ಅವ್ರಿಗೆ ಸುಪ್ರೀಂಕೋರ್ಟ್ ತನಿಖೆ ಬಿಸಿ ಮುಟ್ಟಿಸಿದೆ. ತಮ್ಮನ್ನು ಒತ್ತಾಯ ಪೂರ್ವಕವಾಗಿ ರಜೆ ಮೇಲೆಕಳುಹಿಸಿದ್ದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ವರ್ಮಾ ಸುಪ್ರೀಕೋರ್ಟ್ ಮೆಟ್ಟಿಲೇರಿದ್ರು. ಅಲೋಕ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ಅಲೋಕ್ ಕುಮಾರ್ ವರ್ಮಾ ವಿರುದ್ಧ ತನಿಖೆ 10 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಬೇಕು ಅಂತ ಕೇಂದ್ರ ಜಾಗೃತ ಆಯೋಗಕ್ಕೆ ಆದೇಶಿಸಿದೆ. ನಿವೃತ್ತ ನ್ಯಾ. ಎ.ಕೆ ಪಟ್ನಾಯಕ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ದೀಪಾವಳಿ ರಜೆ ಬಳಿಕ ಅಂದ್ರೆ ನವೆಂಬರ್ 12 ರಂದು ನ್ಯಾಯಾಲಯದಲ್ಲಿ ಮತ್ತೆ ಪ್ರಕರಣದ ವಿಚಾರಣೆ ಮಾಡಲಾಗುತ್ತೆ ಅಂತ ಸುಪ್ರೀಂ ಹೇಳಿದೆ.ಸಿಬಿಐ ಮಧ್ಯಂತರ ಡೈರೆಕ್ಟರ್ ಆಗಿ ಸರ್ಕಾರ ನೇಮಕ ಮಾಡಿರೋ ಎಂ.ನಾಗೇಶ್ವರ್ ರಾವ್ ಅವ್ರು ಯಾವ್ದೇ ಮುಖ್ಯ ಡಿಸಿಷನ್ಸ್ ತಗೋಳಂಗಿಲ್ಲ‌. ಅಕ್ಟೋಬರ್ 23 ರಿಂದ ಹಿಡಿದು ನವೆಂಬರ್ 12 ರವರೆಗೆ ನಾಗೇಶ್ವರ್ ರಾವ್ ತೆಗೆದುಕೊಂಡ ಎಲ್ಲಾ ಡಿಸಿಷನ್ಸ್ ಗಳನ್ನು ಗೌಪ್ಯವಾಗಿ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ತಲುಪಿಸಬೇಕು ಅಂತ ಸೂಚನೆ ನೀಡಿದೆ.

RELATED ARTICLES

Related Articles

TRENDING ARTICLES