ಹುಬ್ಬಳ್ಳಿ: ಬಿ. ಎಸ್. ಯಡಿಯೂರಪ್ಪ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸೋದಕ್ಕೆ ಸಾಧ್ಯವಿಲ್ಲ. ರಾಜ್ಯದಲ್ಲಿ ಮೂರ್ಖತನದ ಸಿಎಂ ಅಧಿಕಾರದಲ್ಲಿದ್ದಾರೆ ಅಂತ ಬಿಜೆಪಿ ವಕ್ತಾರ ಬಿ.ಜಿ.ಪುಟ್ಟಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,”ಜನರ ಹಿತಕ್ಕಿಂತ ಸಿಎಂಗೆ ಮಗನ ಗೆಲುವು ಮುಖ್ಯವಾಗಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರ ಕಚ್ಚಾಟ ತಾರಕಕ್ಕೇರಿದೆ. ‘ಮೈತ್ರಿ’ ಶಾಸಕರು ಬಿಜೆಪಿಗೆ ಬರಲು ಕ್ಯೂ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ 6 ಜನ ಶಾಸಕರಿದ್ದಾರೆ. ಮೇ 23ರ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ” ಅಂತ ಹೇಳಿದ್ರು.
ಸಚಿವ ಡಿ. ಕೆ. ಶಿವಕುಮಾರ್ ಬಗ್ಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಆಸ್ತಿ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಡಿಕೆಶಿಗೆ ಹೋದಲ್ಲೆಲ್ಲ ನಾನೇ ಗೆಲ್ಲಿಸ್ತೀನಿ ಎಂಬ ಭ್ರಮೆಯಲ್ಲಿದ್ದಾರೆ” ಅಂತ ಹೇಳಿದ್ರು.