Friday, November 22, 2024

ನಡೆದುಕೊಂಡೇ ಬಂದು ಮತ ಚಲಾಯಿಸಿದ ರಾಹುಲ್ ಗಾಂಧಿ..!

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಔರಂಗಜೇಬ್​ ನಗರದ ಎನ್​.ಪಿ. ಸೀನಿಯರ್​ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ದೇಶಾದ್ಯಂತ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯುತ್ತಿದ್ದು, ರಾಹುಲ್ ಗಾಂಧಿ ಅವರು ಬೆಳಗ್ಗೆ ಮನೆಯಿಂದಲೇ ನಡೆದುಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.

ದಿನವೂ ಹೈ ಸೆಕ್ಯುರಿಟಿ ವಾಹನದಲ್ಲಿ ಓಡಾಡುವ ರಾಹುಲ್​ ಗಾಂಧಿ ಇಂದು ಭಿನ್ನವಾಗಿ ಕೇಂದ್ರ ದೆಹಲಿಯಲ್ಲಿರುವ ತಮ್ಮ ಮನೆಯಿಂದ ಮತಗಟ್ಟೆಯ ತನಕ ನಡೆದುಕೊಂಡು ಬಂದು ಮತ ಚಲಾಯಿಸಿದ್ರು. ನಂತರ ಮಾತನಾಡಿ, “ಇದೊಂದು ಗುಡ್​ ಫೈಟ್. ನರೇಂದ್ರ ಮೋದಿಯವರು ತಿರಸ್ಕಾರ ಮತ್ತು ನಾನು ಪ್ರೀತಿಯನ್ನು ಉಪಯೋಗಿಸಿಕೊಂಡಿದ್ದೇನೆ. ಪ್ರೀತಿಯೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಜನರು ನಮ್ಮ ಮಾಲೀಕರು. ಜನರ ನಿರ್ಧಾರವನ್ನು ನಾವು ಸ್ವೀಕರಿಸುತ್ತೇವೆ” ಅಂತ ಹೇಳಿದ್ದಾರೆ.

”ಈ ಚುನಾವಣೆಯಲ್ಲಿ ನಾಲ್ಕು ಪ್ರಮುಖ ವಿಚಾರಗಳಿವೆ. ಇವು ನಮ್ಮ ವಿಚಾರಗಳಲ್ಲ. ಜನರ ವಿಚಾರಗಳು. ಇವುಗಳಲ್ಲಿ ನಿರುದ್ಯೋಗ ಪ್ರಮುಖವಾದದ್ದು. ನಂತರ ಕೃಷಿಕರ ಸಮಸ್ಯೆ, ನೋಟು ಅಮಾನ್ಯ, ಗಬ್ಬರ್​ ಸಿಂಗ್ ಟ್ಯಾಕ್ಸ್​, ಭ್ರಷ್ಟಾಚಾರ ಮತ್ತು ರಫೇಲ್ ವಿವಾದ” ಅಂತ ಹೇಳಿದ್ರು. ನವದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ಮಾಕೆನ್ ಅವರೂ ರಾಹುಲ್ ಗಾಂಧಿ ಜೊತೆಗಿದ್ದರು.

ಇಂದು ದೇಶಾದ್ಯಂತ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯಲಿದ್ದು, 6 ರಾಜ್ಯ, ಒಂದು ಕೇಂದ್ರಾಡಳಿತ ಕ್ಷೇತ್ರದಲ್ಲಿ ಜನ ಹಕ್ಕು ಚಲಾಯಿಸಲಿದ್ದಾರೆ. ದೇಶದ 59 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳದ ತಲಾ 8 ಕ್ಷೇತ್ರ, ದೆಹಲಿಯ 7 ಮತ್ತು ಜಾರ್ಖಂಡ್​ನ 4 ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ.

RELATED ARTICLES

Related Articles

TRENDING ARTICLES