Thursday, January 2, 2025

”ಸಿದ್ದರಾಮಯ್ಯ ಸಿಎಂ ಆಗ್ಬೇಕು ಅಂತ ನಾನೂ ಹೇಳುತ್ತೇನೆ” : ಡಿಸಿಎಂ

ಸಿದ್ದರಾಮಯ್ಯ ಸಿಎಂ ಆಗ್ಬೇಕು ಅಂತ ನಾನು ಕೂಡ ಹೇಳುತ್ತೇನೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ..!
ತುಮಕೂರಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ನಡೆಸಿದ್ರು. ಸಿದ್ದು ಅಭಿಮಾನಿಗಳು ಸಿಎಂ ಆಗ್ಬೇಕು ಅಂತ ಹೇಳ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಅಧಿಕೃತವಲ್ಲ ಎಂದರು.
”ಮೈತ್ರಿ ಸರ್ಕಾರ ಸುಗಮವಾಗಿ ಸಾಗುತಿದೆ. ಕಳೆದ ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಕೆಲವರಲ್ಲಿ ವಿರೋಧ ಇತ್ತು. ಶೇ 5 ರಷ್ಟು ವಿರೋಧ ಹೊರತು ಪಡಿಸಿ ಉಳಿದಂತೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದೇವೆ. ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಕೆಲ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಇತ್ತು. ತಮ್ಮ ಕ್ಷೇತ್ರದ ಕೆಲಸ ಆಗಿಲ್ಲ ಎನ್ನುವ ಅಸಮಾಧಾನ ಇತ್ತು. ಈಗ ಎಲ್ಲವೂ ಸರಿಹೋಗಿದೆ. ಮುಖ್ಯಮಂತ್ರಿ ಸ್ಥಾನದ ಚರ್ಚೆ ಈಗ ಇಲ್ಲ. ಅವರವರ ಅಭಿಮಾನಿಗಳು ಅವರ ನಾಯಕರು ಸಿಎಂ ಆಗಬೇಕು ಅಂತಾರೆ. ಅದು ಅಧಿಕೃತವಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅಂತಾ ನಾನೂ ಹೇಳುತ್ತೇನೆ. ಆದರೆ ಅದು ಅಧಿಕೃತವಲ್ಲ” ಎಂದು ಹೇಳಿದರು.
ಚಿಂಚೋಳಿ ಕುಂದುಗೋಳ ಉಪ ಚುನಾವಣೆ ನಡೆಯುತ್ತಿದೆ. ನಾನು‌ ಚಿಂಚೋಳಿ ಉಸ್ತುವಾರಿ. ಎರಡೂ ಕ್ಷೇತ್ರದಲ್ಲಿ ನಾವು ಬಹುಮತದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

RELATED ARTICLES

Related Articles

TRENDING ARTICLES