ಕಲಬುರಗಿ: ನನ್ನ ಮಗ ಅವಿನಾಶ್ ಜಾಧವಗೆ ಟಿಕೆಟ್ ನೀಡಲು ಬಿಜೆಪಿ ನಿರ್ಣಯಿಸಿದೆ. ನೂರಕ್ಕೆ ನೂರರಷ್ಟು ನನ್ನ ಮಗ ಅವಿನಾಶ್ ಗೆಲ್ಲುತ್ತಾನೆ ಅಂತ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ. ಮಗನಿಗೆ ಟಿಕೆಟ್ ನೀಡುತ್ತಿರುವ ಬಗ್ಗೆ ಸಮರ್ಥನೆ ನೀಡಿರುವ ಉಮೇಶ ಜಾಧವ್, “ತಂದೆ ಮಕ್ಕಳ ರಾಜಕಾರಣಕ್ಕೆ ನಾನೆಲ್ಲೂ ವಿರೋಧ ಮಾಡಿಲ್ಲ. ಆದರೆ ಖರ್ಗೆ ಅತಿಯಾದ ವ್ಯಾಮೋಹದಿಂದ ಮಗನನ್ನು ಮಂತ್ರಿ ಮಾಡಿದ್ರು” ಎಂದಿದ್ದಾರೆ.
ಅವಿನಾಶ್ಗೆ ಟಿಕೆಟ್ ಬಹುತೇಕ ಖಚಿತವಾಗುತ್ತಿರುವಂತೆಯೇ ಕಲುಬುರಗಿಯ ಚಿಂಚೋಳಿಯಲ್ಲಿ ಟಿಕೆಟ್ ಕದನ ಆರಂಭವಾಗಿದ್ದು, ಅವಿನಾಶ್ ಹೆಸರು ಶಿಫಾರಸ್ಸಿಗೆ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಮಾಜಿ ಸಚಿವ, ಬಿಜೆಪಿ ಟಿಕೆಟ್ ಆಕಾಂಕ್ಷಿ, ಸುನಿಲ್ ವಲ್ಯಾಪುರೆ ಇಂದು ಬೆಂಬಲಿಗರ ಸಭೆ ನಡೆಸಲಿದ್ದಾರೆ. ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.