Saturday, October 26, 2024

ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ..! ದೊಡ್ಡಗೌಡರು ಕೋಟಿ ಕೋಟಿ ಕೊಟ್ಟಿದ್ದು ಯಾರಿಗೆ?

ತುಮಕೂರು : ಎಲ್ಲರ ಗಮನ ಸೆಳೆದ ಲೋಕಸಭಾ ಕ್ಷೇತ್ರಗಳಲ್ಲಿ ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರವೂ ಒಂದು. ಕಾಂಗ್ರೆಸ್​​ ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡಗೆ ಟಿಕೆಟ್​ ನೀಡಿದೆ, ಮೈತ್ರಿ ಧರ್ಮದ ಹೆಸರಲ್ಲಿ ಜೆಡಿಎಸ್​ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಣಕ್ಕಿಳಿದಿದ್ದು ಎಲ್ಲಾ ಈಗ ಇತಿಹಾಸ. ಇನ್ನೇನೆ ಇದ್ದರೂ ಮೇ.23ರ ರಿಸೆಲ್ಟ್​ ನೋಡಬೇಕಿದೆ ಅಷ್ಟೇ..!
ಈ ನಡುವೆ ತುಮಕೂರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಇದು ಇಡೀ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿರುವ ನ್ಯೂಸ್.. ಈ ಮಹಾ ಸ್ಫೋಟಕ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿರೋದೇ ನಿಮ್ಮ ಪವರ್ ಟಿವಿ. ಈ ನ್ಯೂಸ್​ ನೋಡಿದ್ರೆ, ಲೋಕಸಭಾ ಚುನಾವಣೆ ವೇಳೆ ಹೀಗೆಲ್ಲಾ ನಡೆದಿತ್ತಾ? ಗದ್ದುಗೆ ಏರಲು ರಾಜಕಾರಣಿಗಳು ಹಾಗೆಲ್ಲಾ ಮಾಡ್ತಾರಾ ಅಂತ ಸಹಜ ಪ್ರಶ್ನೆಯೊಂದು ನಿಮ್ಮಲ್ಲಿ ಮೂಡೇ ಮೂಡುತ್ತೆ.
ವಿಷಯ ಏನಪ್ಪಾ ಅಂದ್ರೆ, ನಿಮಗೆ ಗೊತ್ತೇ ಇರುವಂತೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಹಾಲಿ ಸಂಸದ ಮುದ್ದಹನುಮೇಗೌಡ ದೇವೇಗೌಡರ ವಿರುದ್ಧ ತೊಡೆ ತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಮಧುಗಿರಿಯ ಮಾಜಿ ಶಾಸಕ ಕೆ.ಎನ್​ ರಾಜಣ್ಣ ಕೂಡ ದೇವೇಗೌಡರ ವಿರುದ್ಧ ‘ಲೋಕ’ಕಣದಲ್ಲಿ ಸ್ಪರ್ಧಿಸಲು ಡಿಸೈಡ್ ಮಾಡಿದ್ದರು. ಇಬ್ಬರೂ ದೊಡ್ಡಗೌಡರ ವಿರುದ್ಧ ಸ್ಪರ್ಧೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ಬಳಿಕ ಇಬ್ಬರೂ ನಾಮಪತ್ರ ವಾಪಸ್​ ಪಡೆದು ದೊಡ್ಡಗೌಡರಿಗೇ ಬೆಂಬಲ ಸೂಚಿಸಿದ್ದರು..!
ಕಾಂಗ್ರೆಸ್ ನಾಯಕರ ಮನವೊಲಿಕೆಯಿಂದ ಮುದ್ದಹನುಮೇಗೌಡ್ರು, ರಾಜಣ್ಣ ನಾಮಪತ್ರ ಹಿಂಪಡೆದಿದ್ದರು. ಆದರೆ, ಈಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಆಡಿಯೋವೊಂದು ವೈರಲ್ ಆಗಿದೆ. ಆ ಪ್ರಕಾರ ನಾಮಪತ್ರ ವಾಪಸ್​ ಪಡೆಯಲು ಮುದ್ದಹನುಮೇಗೌಡರು ಮತ್ತು ರಾಜಣ್ಣ ಹಣ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲಾ ಕಾಂಗ್ರೆಸ್​​ ಸೋಶಿಯಲ್ ಮೀಡಿಯಾ ಸಂಚಾಲಕ ದರ್ಶನ್ ಮತ್ತು ‘ಕೈ’ ಕಾರ್ಯಕರ್ತ ನಡೆಸಿದ ಸಂಭಾಷಣೆಯಲ್ಲಿ ಮುದ್ದಹನುಗೇಗೌಡರು ನಾಮಪತ್ರ ವಾಪಸ್​ ಪಡೆಯಲು ಮೂರುವರೆ ಕೋಟಿ ರೂ ಹಣ ಪಡೆದಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಕೆ.ಎನ್​ ರಾಜಣ್ಣ ಅವರೂ ಕೂಡ 3.5ವರೆ ಅಂತ ಹೇಳಲಾಗುತ್ತಿದೆ.

ದರ್ಶನ್ ಮತ್ತು ಕಾರ್ಯಕರ್ತನ ನಡುವೆ ಸಂಭಾಷಣೆ
ದರ್ಶನ್: ಮೂರೂವರೆ ಕೋಟಿ ತಗೋಂಡ್ ಮೇಲೆ **** ಬಂದು ಇಲ್ಲಿ ಕೆಲ್ಸ ಮಾಡಬೇಕು ತಾನೇ.
ಕಾಂಗ್ರೆಸ್ ಕಾರ್ಯಕರ್ತ: ಎಷ್ಟು ಎಷ್ಟು?

ದರ್ಶನ್: ಮೂರೂವರೆ
ಕಾಂಗ್ರೆಸ್ ಕಾರ್ಯಕರ್ತ: ಯಾರ್ ತಗೊಂಡಿರೋದು?

ದರ್ಶನ್: ಇಬ್ರೂವೆ
ಕಾಂಗ್ರೆಸ್ ಕಾರ್ಯಕರ್ತ: ಇವ್ರಿಗೂ ಮೂರೂವರೆ ಕೋಟಿ, ಅವ್ರಿಗೂ ಮೂರೂವರೆ ಕೋಟಿ. ರಾಜಣ್ಣರಿಗೂ ಮೂರೂವರೆ ಕೋಟಿ. ಮುದ್ದಹನುಮೇಗೌಡರಿಗೂ ಮೂರೂವರೆ ಕೋಟಿ.

ದರ್ಶನ್: ಹೌದು.
ಕಾಂಗ್ರೆಸ್ ಕಾರ್ಯಕರ್ತ: ಹೇಳಿ ಸಾರ್.

ದರ್ಶನ್: ಏನ್ ಹೇಳಿ ಸಾರ್. ನಂಗೇನ್ **** ಮತ್ತೆ. ಅಂಥ ಸತ್ಯಗಳನ್ನ ತಿಳ್ಕೊಂಡ ಮೇಲೆ ಗೊತ್ತಾಗೋದು ನಮ್ಗೆ. ಹಂಗಾಗಿ ನಾವ್ ಸ್ಟ್ರಾಂಗ್‌ ಆಗಿ ಕೆಲಸ ಮಾಡಿದ್ದು. ಇಡೀ ಊರಿಗೂರೇ ಮಾತಾಡ್ತೀದೆ. ನಂಗ್ ಯಾರೋ ಹತ್ತಿರದೌರು ಹೇಳಿದ್ದು.. ಬಲ್ಲವರು.. ಕೆಲವೊಂದನ್ನ ನೋಡಿರ್ತಾರೆ. ಕೆಲವರು.
ಕಾಂಗ್ರೆಸ್ ಕಾರ್ಯಕರ್ತ: ಅಲ್ಲ.. ಬರೀ ಮೂರೂವರೆ ಕೋಟಿಗೆ ಬೆಲೆ ಕಟ್ಟಿಕೊಂಡು ಬಿಟ್ರಾ ಇವ್ರು ಅಂತಾ.

ದರ್ಶನ್: ಇಲ್ಲ.. ಆಫ್ಟರ್‌ ವಿನ್ನಿಂಗ್‌ಗೆ ಮತ್ತೆ ಅಂತಾ ಕೇಳಿಕೊಂಡಿದ್ದಾರೆ. ಆಯ್ತಾ ಸರಿ. ತಿಂದ್ಮೇಲೆ ಅದಕ್ಕೆ ಗೌರವ ಕೊಡಬೇಕು ತಾನೆ. **** ತಿನ್ನದೇನೇ ಇರಬೇಕಿತ್ತು.. ಇಲ್ಲ ನಾಮಪತ್ರ ಯಾಕ್ ವಾಪಸ್‌ ತಗೊಂಡಿದ್ದು.
ಕಾಂಗ್ರೆಸ್ ಕಾರ್ಯಕರ್ತ: ನೀವ್ ಹೇಳಿದಂಗೆ ದುಡ್ಡು ಬಂತು ತಗೊಂಡೌವ್ರೆ.

ದರ್ಶನ್: ಇಟ್ ಈಸ್‌ ಏ ಕಾಮನ್ ಸೆನ್ಸ್‌. ಈಗ ಹೇಳಿ ಯಾವ ಸಿದ್ಧಾಂತ.
ಕಾಂಗ್ರೆಸ್ ಕಾರ್ಯಕರ್ತ: ಅಲ್ಲ ಸಿದ್ದಾಂತ ನಾನು.. ಮುದ್ದಹನುಮೇಗೌಡರದ್ದು, ರಾಜಣ್ಣನವರದ್ದು ಸಿದ್ದಾಂತ ಅಂತಾ ಹೇಳ್ತಿಲ್ಲ..

ದರ್ಶನ್: ಹಂಗಲ್ಲ.. ನೋ ನೋ.. ನಾಟ್‌ ಏಟಾಲ್. ಸೀ.. ಇಡೀ ಕೊರಟಗೆರೆ ಜನ ಒಟ್ಟಾಗಿ ನಿಂತಿದ್ದು. ಇದೇ ಮುದ್ದಹನುಮೇಗೌಡರ ಪರವಾಗಿ. ಆಮೇಲೆ ಟಿವಿ ಡಿಬೇಟ್‌ನಲ್ಲಿ ಬರ್ತಾಯಿದ್ದದ್ದು.. ಹೀ ರೆಸ್ಪೆಕ್ಟ್‌ ಆ್ಯಂಡ್. ವಿ ಸ್ಟ್ಯಾಂಡ್‌ ವಿತ್‌ ಮುದ್ದಹನುಮೇಗೌಡ. ದ ಎಂಡ್ ಆಫ್‌ ದಿ ಡೇ. ಮೈತ್ರಿ ನಮ್ ಧರ್ಮ ಏನಿದೆ. ರಾಹುಲ್ ಗಾಂಧಿ ಪ್ರಧಾನಿ ಆಗೋದಕ್ಕೆ. ವಿ ಸ್ಟ್ಯಾಂಡ್ ವಿತ್ ಮೈತ್ರಿ.

ದರ್ಶನ್: ಸಾರ್. ಇದೇ ಪ್ರ್ಯಾಕ್ಟಿಕಲ್. ನಂಗ್ ಅಸಹ್ಯ ಅನಿಸುತ್ತೆ ಸಾರ್ ಮುದ್ದಹನುಮೇಗೌಡ್ರು. ನೆಕ್ಟ್ಸ್‌ ಟೈಮ್‌ಗೆ ಆಯ್ತು. ಒಂದು ಮಂತ್ರಿ ಯಾವ್ದೋ ಒಂದು ಪೊಸಿಶನ್‌ಗೆ ಏನೋ ಒಂದು ಸಿಕ್ಕೇ ಸಿಗೋದು ಅವರ ವರ್ಚಸ್ಸು.. ಘನತೆ ಗೌರವಕ್ಕೆ.
ಕಾಂಗ್ರೆಸ್ ಕಾರ್ಯಕರ್ತ: ಹೌದು..

ದರ್ಶನ್: ಆಯ್ತಾ.. ಹೈಯಸ್ಟ್‌.. 172 ಟ್ರಾನ್ಸಫರ್‌ ಮಾಡಿಸಿಕೊಂಡಿದ್ದಾರೆ ಸಾರ್. ಎಲ್ಲಾ ದೊಡ್ಡ ದೊಡ್ಡ ಆಫೀಸರ್ಸ್‌ನ
ಕಾಂಗ್ರೆಸ್ ಕಾರ್ಯಕರ್ತ: ಅಬ್ಬಬ್ಬಬ್ಬಾ..

ದರ್ಶನ್: ವಿತ್‌ ರೆಕಾರ್ಡ್ಸ್‌ ಇದೆ.
ಕಾಂಗ್ರೆಸ್ ಕಾರ್ಯಕರ್ತ: 172 ಜನನ್ನ

ದರ್ಶನ್: ಟ್ರಾನ್ಸ್‌ಫರ್‌ ಎಲ್ಲಾ ದೊಡ್ ದೊಡ್ಡ ಆಫೀಸರ್ಸ್‌.
ಕಾಂಗ್ರೆಸ್ ಕಾರ್ಯಕರ್ತ: ಹೋ.. ಹೋ.. ಹೋ.. ಮುದ್ದಹನುಮೇಗೌಡ್ರು?

ದರ್ಶನ್: ಇವರಿಗೆ ಕಾಂಟ್ರ್ಯಾಕ್ಟ್‌ ಕೊಟ್ಟಿರೋದು. ಇವರಿಗೆ ಅನುದಾನ.. ಬಲರಾಯ ಯಾಕೆ ಬಂದು ಅಲ್ಲಿ ನಿಂತಿದ್ದು, ಅವಕಾಶ ಇರೋ ಹೊತ್ತಿಗೆ ತಾನೆ.
ಕಾಂಗ್ರೆಸ್ ಕಾರ್ಯಕರ್ತ: ಹೌದು.

ದರ್ಶನ್: ಅವರಿಗೆ ಕೊಡಿಸ್ತಾರೆ. ಆಮೇಲೆ ಇನ್ನೊಂದು ಮೂರು ಜನ ಯಾರೋ ಇದ್ದಾರೆ. ಆಯ್ತಾ.. ಡೈರೆಕ್ಟ್‌ ಅವರಿಗೆ ಕಮಿಷನ್ ಹೋಗುತ್ತೆ. ಸೀ.. ವ್ಯಕ್ತಿ ಕೆಲ್ಸ ಮಾಡಿದ್ದಾರೆ ಹೋರಾಡಿದಾರೆ.. ಮಾತಾಡಿದಾರೆ. ಆದ್ರೆ ಅವ್ರ ವ್ಯಯಕ್ತಿಕ ಲಾಭಗಳು ಎಷ್ಟು ತಗೊಂಡಿದಾರೆ ಅಂತಾ ಲೆಕ್ಕಾ ಹಾಕಿದಾಗ ಐ ಫೀಲ್ ವೇರಿ ಬ್ಯಾಡ್. ಅವರಿಗಿಂತ ಆಗಬಹುದು. ದೇವೇಗೌಡ್ರು ತುಮಕೂರಲ್ಲಿ ಗೆದ್ರೆ ಅವ್ರು ಸಿಗಲ್ಲ ಕೈಗೆ. ಬಟ್ ಅವ್ರು ಶ್ರದ್ಧೆ ತೋರ್ತಾರೆ. ಹ್ಯಾಂಡಲ್‌ ಮಾಡೋದಕ್ಕೆ. ಅಂದ್ರೆ ಕಷ್ಟಸುಖ ತಗೊಳೋದಕ್ಕೆ.. ಆದ್ರೆ, ಇದೇ ದೇವೇಗೌಡ್ರು ಎರಡು ತಿಂಗಳು ಮೊದ್ಲೆ ಏನಾದ್ರೂ ಅನೋನ್ಸ್‌ ಮಾಡಿ ಬಿಟ್ಟಿದ್ರೆ, ನಮ್ ತುಮಕೂರಿಗೆ ಒಂದೆರೆಡು ಸಾವಿರ ಕೋಟಿ ಬಂದ್ ಬಿಡೋದು ಬಜೆಟ್‌ಲ್ಲಿ.
ಕಾಂಗ್ರೆಸ್ ಕಾರ್ಯಕರ್ತ: ಹೌದು.. ಹೌದು..

ದರ್ಶನ್: ಮತ್ತೆ ದೇವೇಗೌಡ್ರು ಗೆದ್ರೆ, ಇವತ್ತು ಬರೆದ್ ಇಟ್ಕೊಳ್ಳಿ. ನಮ್ ಸಾಹೇಬ್ರು ಸಿಎಂ ಆಗೋದು 100%.
ಕಾಂಗ್ರೆಸ್ ಕಾರ್ಯಕರ್ತ: ಆಗಲ್ ಬಿಡಿ ಸಾರ್..

ದರ್ಶನ್: ಇಲ್ಲಾ.. ಶೋರ್‌ ಅದು..

https://www.facebook.com/powertvnews/videos/2116916185090925/?eid=ARDi4cfm7g4XFC6WOKl_pmTdiE_1xEYCZ86Fyvv9H_52uO4cA-la3G4E1d1ScKurEKoQ798ljfrYOgy_

RELATED ARTICLES

Related Articles

TRENDING ARTICLES