ರಾಯಚೂರು: ಮಧು ಪತ್ತಾರ್ ಸಾವಿಗೆ ನ್ಯಾಯ ದೊರಕಿಸುವಂತೆ ಕಪ್ಪುಪಟ್ಟಿ ಧರಿಸಿ ಜನ ಮತ ಚಲಾಯಿಸಿದ್ರು. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು ರಾಯಚೂರಲ್ಲಿ ಮತದಾರರು ಕಪ್ಪು ಪಟ್ಟಿ ಕಟ್ಟಿಕೊಂಡು ಮತಗಟ್ಟೆಗೆ ಬಂದಿದ್ದಾರೆ.
ಮಧು ಪತ್ತಾರ್ ಸಾವಿಗೆ ನ್ಯಾಯಕ್ಕಾಗಿ ವಿನೂತನ ಪ್ರತಿಭಟನೆ ಮಾಡಿದ್ದಾರೆ. ‘ಜಸ್ಟಿಸ್ ಫಾರ್ ಮಧು’ ಭಿತ್ತಿಪತ್ರ ಹಿಡಿದು ಮತದಾನ ಮಾಡಲಾಗಿದೆ. ಶಕ್ತಿನಗರದ ಕೆಪಿಸಿಎಲ್ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ಜನ ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ದಾರೆ. ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಪ್ಪು ಪಟ್ಟಿ ಧರಿಸಿ ಮತ ಚಲಾಯಿಸಿದ್ದಾರೆ. ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ರಾಜ್ಯಾದ್ಯಂತ ಜನ ಒತ್ತಾಯಿಸಿದ್ದಾರೆ.