ರಾಯಚೂರು : ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಯಾರಿಗೆ ಮತ ಹಾಕಿದ್ದೇವೆ ಅಂತ ಬಹಿರಂಗ ಪಡಿಸೋದು, ಅದರಲ್ಲೂ ವಿಡಿಯೋ, ಫೋಟೋ ತೆಗೆಯುವುದು ಅಪರಾಧ. ಈ ಬಗ್ಗೆ ಪದೇ ಪದೇ ಸುದ್ದಿ ಆಗುತ್ತಿದ್ದರೂ ಕೆಲವರು ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ.
ರಾಯಚೂರಿನಲ್ಲಿ ಇಬ್ಬರು ಮತದಾರರು ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ್ದಾರೆ.
ಓರ್ವ ಮತದಾರ ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ಅವರಿಗೆ ಮತ ಹಾಕಿ ವಿಡಿಯೋ ಮಾಡಿಕೊಂಡಿದ್ದರೆ, ಇನ್ನೋರ್ವ ಮತದಾರ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ಗೆ ಮತ ಹಾಕಿ ವಿಡಿಯೀ ಮಾಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮತಗಟ್ಟೆಯಲ್ಲಿ ಮೊಬೈಲ್ ನಿಷೇಧವಿದ್ದರೂ ಮತದಾನದ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ಮೂಲಕ ಎರಡೂ ಪಕ್ಷಗಳ ಅಭ್ಯರ್ಥಿಗಳು ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ್ದಾರೆ.