ಕೊಪ್ಪಳ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಾಳೆ ನಡೆಯಲಿದ್ದು, ಕೊಪ್ಪಳ ಮತಗಟ್ಟೆ ಅಧಿಕಾರಿಗಳಲ್ಲಿ ಹೊಸದೊಂದು ಗೊಂದಲ ಮೂಡಿದೆ. ಇಲ್ಲಿನ ಮತಗಟ್ಟೆ ಸಿಬ್ಬಂದಿ ಚಪ್ಪಲಿ ಹಾಕೋದೋ, ಬಿಡೋದಾ ಎಂಬ ಗೊಂದಲದಲ್ಲಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಗುರುತು ನೀಡಿದ್ದು, ಮತಗಟ್ಟೆಯಲ್ಲಿ ಚಪ್ಪಲಿ ಹಾಕೋದೋ ಬೇಡ್ವೋ ಅಂತ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಪಕ್ಷೇತರ ಅಭ್ಯರ್ಥಿ ಪ.ಯ.ಗಣೇಶ್ಗೆ ಚಪ್ಪಲಿ ಚಿಹ್ನೆ ನೀಡಲಾಗಿದ್ದು, ಚುನಾವಣಾ ಆಯೋಗದ ಪ್ರಕಾರ ಕ್ಷೇತ್ರದ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿಯ ಚಿಹ್ನೆಯ ಗುರುತು ಕಾಣುವಂತಿಲ್ಲ. ಇದೀಗ ಮತಗಟ್ಟೆ ಸಿಬ್ಬಂದಿಗೆ ಚಪ್ಪಲಿ ಚಿಹ್ನೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಗೊಂದಲಕ್ಕೀಡಾಗಿದ್ದಾರೆ.