ರಾಯಚೂರು : ಮಧು ಪತ್ತಾರ್ ಹತ್ಯೆಗೆ ಕಾರಣಾವಾಯ್ತಾ ರಾಯಚೂರು ಪೊಲೀಸರ ನಿರ್ಲಕ್ಷ್ಯ ಅನ್ನೋ ಪ್ರಶ್ನೆ ಮೂಡಿದೆ. ಸದರ್ ಬಜಾರ್ ಠಾಣೆ ರೈಟರ್ ಆಂಜನೇಯ ಮಧು ನಾಪತ್ತೆ ದೂರು ಪಡೆಯದಂತೆ ತಡೆಹಿಡಿದಿದ್ದರು ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಕಾಲೇಜು ಬಳಿ ಭಾನುವಾರವೇ ಮಧು ಬೈಕ್ ಹಾಗೂ ಮೊಬೈಲ್ ಪತ್ತೆಯಾಗಿದ್ದರೂ ನಾಪತ್ತೆ ದೂರನ್ನು ದಾಖಲಿಸಿಕೊಳ್ಳಲಿಲ್ಲ. ರೈಟರ್ ಆಂಜನೇಯ ಮಧು ಹತ್ಯೆಯ ಆರೋಪಿ ಸುದರ್ಶನ್ ಅವರ ಸಂಬಂಧಿ. ನಾಪತ್ತೆ ದೂರನ್ನು ದಾಖಲಿಸಿಕೊಳ್ಳದಂತೆ ತಡೆ ಹಿಡಿದಿದ್ದೇ ಈ ಆಂಜನೇಯ. ನಾಪತ್ತೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ಬೇಜವಬ್ದಾರಿತನ ಮೆರೆದಿದ್ದಾರೆ ಅಂತ ಮಧು ಪೋಷಕರು ನೇರಾನೇರ ಆರೋಪ ಮಾಡಿದ್ದಾರೆ.
ಇಡೀ ಪ್ರಕರಣದಲ್ಲಿ ರೈಟರ್ ಆಂಜನೇಯ ಪ್ರಭಾವ ಬೀರಿದ್ದಾರಾ? ಇಷ್ಟೆಲ್ಲಾ ವಿಷಯ ಗೊತ್ತಿದ್ದರೂ ಪ್ರಕರಣದ ತನಿಖೆ ಆಗೋವರೆಗೂ ಆಂಜಯನೇಯ ಅವರನ್ನು ಸಸ್ಪೆಂಡ್ ಮಾಡ್ತಿಲ್ಲ ಯಾಕೆ? ರಾಯಚೂರು ಎಸ್ಪಿ ಕಿಶೋರ್ ಬಾಬು ಅವರಿಗೂ ಇದೆಲ್ಲಾ ಗಮನಕ್ಕೆ ಬಂದಿಲ್ವಾ? ಅಂತ ಪ್ರಶ್ನೆ ಮಾಡಬೇಕಾಗಿದೆ. ಗೃಹ ಸಚಿವ ಎಂ.ಬಿ ಪಾಟೀಲರೇ ನೀವಾದರೂ ಇದನ್ನು ಗಂಭೀರವಾಗಿ ಪರಿಗಣಿಸಿ, ಒಮ್ಮೆ ಕಣ್ತೆರೆದು ನೋಡಿ ಸಚಿವರೇ.. ಇಂಥಾ ಅಮಾನುಷ ಕೃತ್ಯ ಜಿಲ್ಲೆಯಲ್ಲಿ ನಡೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಏನ್ ಮಾಡ್ತಿದ್ದಾರೆ ಅಂತ ಪ್ರತಿಯೊಬ್ಬರೂ ಕೇಳಬೇಕಿದೆ.
ಮಧು ನಾಪತ್ತೆ ದೂರು ದಾಖಲಿಸಿಕೊಳ್ಳಲಿಲ್ಲ ಏಕೆ?
TRENDING ARTICLES