ಬೆಂಗಳೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. “ಮಧುವಿನ ಅನುಮಾನಾಸ್ಪದ ಸಾವಿನ ತನಿಖೆಯಾಗಬೇಕು. ಅತೀ ಶೀಘ್ರದಲ್ಲಿ, ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಮಧುಗೆ ನ್ಯಾಯ ಸಿಗಬೇಕು. ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಶಿಕ್ಷೆಯಾಗಬೇಕು. ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ರೂಪುಗೊಳ್ಳಬೇಕು ಅಂತಾ ದರ್ಶನ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಜಸ್ಟಿಸ್ ಫಾರ್ ಮಧು ಅಭಿಯಾನ ಸದ್ದು ಮಾಡುತ್ತಿದ್ದು, ವಿದ್ಯಾರ್ಥಿ ಸಮೂಹ ಸೇರಿದಂತೆ ಎಲ್ಲರೂ ಮಧು ಸಾವಿಗೆ ನ್ಯಾಯ ಸಿಗಲು ಹೋರಾಡುತ್ತಿದ್ದಾರೆ. ಜಸ್ಟಿಸ್ ಫಾರ್ ಮಧು ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ನಲ್ಲೂ ಸದ್ದು ಮಾಡಿದೆ.