ಹುಬ್ಬಳ್ಳಿ: ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ವಿನಯ್ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೊದಲು ಎಂ.ಬಿ. ಪಾಟೀಲ್ ಅವರೂ ಡಿಕೆಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ವಿನಯ್ ಕುಲಕರ್ಣಿ ಕೂಡಾ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ಲಿಂಗಾಯತ ಪ್ರತ್ಯೇಕತೆ ಬಗ್ಗೆ ಡಿಕೆಶಿ ಹೇಳಿಕೆಗಳಿಗೆ ವಿನಯ್ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಲಿಂಗಾಯತ ಹೋರಾಟಕ್ಕೂ ಡಿಕೆಶಿಗೂ ಸಂಬಂಧವೇ ಇಲ್ಲ. ಲಿಂಗಾಯತ ಸಮಾಜದ ಬಗ್ಗೆ ಡಿಕೆಶಿ ಮಾತಾಡೋ ಅಗತ್ಯವೇ ಇರಲಿಲ್ಲ. ಡಿಕೆಶಿ ಗೌಡರ ಸಮುದಾಯದವರು. ಅವರ ಸಮಾಜದ ಬಗ್ಗೆ ನಾವು ಮಾತಾಡಿದ್ರೆ ತಪ್ಪಾಗುತ್ತೆ ಎಂದು ಡಿ.ಕೆ. ಶಿವಕುಮಾರ್ ಅವರನ್ನು ವಿನಯ್ ಕುಲಕರ್ಣಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.