Monday, November 25, 2024

“ಮಧು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ರೇಪ್ & ಮರ್ಡರ್​​”..?

ರಾಯಚೂರು : ಮಧು ಪತ್ತಾರ್​ ಅವರದ್ದು ಆತ್ಮಹತ್ಯೆಯಲ್ಲ, ಅದು ರೇಪ್ ಅಂಡ್​ ಮರ್ಡರ್​. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ‘ಜಸ್ಟಿಸ್​​ ಫಾರ್​ ಮಧು’ ಅಭಿಯಾನ ಆರಂಭಿಸಲಾಗಿದೆ.
ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ ಮಧು ಪತ್ತಾರ್​​ ಕಳೆದ ಶನಿವಾರದಿಂದ ಕಾಣೆಯಾಗಿದ್ದರು. ಮಾಣಿಕ ಪ್ರಭು ದೇವಸ್ಥಾನದ ಹಿಂಭಾಗದ ಗುಡ್ಡದಲ್ಲಿ ಮಂಗಳವಾರ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ನನ್ನ ಸಾವಿಗೆ ನಾನೇ ಕಾರಣ ಅಂತ ಬರೆದಿದ್ದ ಡೆತ್​​​ ನೋಟ್​ ಸಿಕ್ಕಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಕೆಯ ತಾಯಿ ರೇಣುಕಾದೇವಿ ನೇತಾಜಿನಗರ ಪೊಲೀಸ್​ ಸ್ಟೇಷನಲ್ಲಿ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುದರ್ಶನ್​ ಯಾದವ್​ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಐಪಿಸಿ ಸೆಕ್ಷನ್ 302 & 376 ರ ಅಡಿ (ಅತ್ಯಾಚಾರ ಮತ್ತು ‌ಕೊಲೆ) ಪ್ರಕರಣ ದಾಖಲಾಗಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ನವೋದಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮಧು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದು ರೇಪ್​ ಅಂಡ್​ ಮರ್ಡರ್​ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಗೆ ನ್ಯಾಯ ಕೊಡಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ‘ಜಸ್ಟಿಸ್​​ ಫಾರ್​ ಮಧು’ ಹೆಸರಿನಲ್ಲಿ ಆಂದೋಲನ ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES