ದಾವಣಗೆರೆ : ರಾಹುಲ್ ಗಾಂಧಿಯನ್ನು ಸರ್ಜಿಕಲ್ ಸ್ಟ್ರೈಕ್ ವೇಳೆ ಕರೆದೊಯ್ಯಬೇಕು. ವಾಪಸ್ ಬಂದರೆ ಬರಲಿ, ಇಲ್ಲವೇ ಸೈನಿಕರ ಜೊತೆ ಸ್ವರ್ಗ ಸೇರಲಿ ಅಂತ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ರಾಹುಲ್ನನ್ನು ಸರ್ಜಿಕಲ್ ಸ್ಟ್ರೈಕ್ಗೆ ಕರ್ಕೊಂಡು ಹೋಗ್ಬೇಕು. ವಾಪಸ್ ಬಂದ್ರೆ ಬರಲಿ, ಇಲ್ಲವೇ ಸೈನಿಕರ ಜೊತೆ ಸ್ವರ್ಗ ಸೇರಲಿ ಅಂದರು. ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಂಗಚೇಷ್ಟೆ ಮಾಡೋ ಏಕೈಕ ವ್ಯಕ್ತಿ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.
7 ಕ್ಷೇತ್ರಗಳಲ್ಲಿ 3ರ ಕ್ಷೇತ್ರಗಳಲ್ಲಿ ಕುಟುಂಬದವೇ ಸ್ಪರ್ಧೆ ಮಾಡಿದ್ದಾರೆ. ಉಳಿದ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳೇ ಇಲ್ಲ ಅಂತ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.
ರಾಹುಲ್ ವಾಪಸ್ ಬಂದ್ರೆ ಬರಲಿ, ಇಲ್ಲ ಸ್ವರ್ಗ ಸೇರಲಿ : ಆಯನೂರು ಮಂಜುನಾಥ್
TRENDING ARTICLES