ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರೋ ಒಡಿಐ ವರ್ಲ್ಡ್ಕಪ್ಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ 15 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್ ಶರ್ಮಾ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದ್ದು, ಅಂಥಾ ಅಚ್ಚರಿಯ ಸೇರ್ಪಡೆಯಾಗಿಲ್ಲ.
ಅನುಭವಿ ಆಟಗಾರ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಬಲ ತುಂಬಿದಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್, ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ಚಾನ್ಸ್ ಸಿಕ್ಕಿದೆ. ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾಧವ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ವರ್ಲ್ಡ್ಕಪ್ ತಂಡದಲ್ಲಿ ಸ್ಥಾನ ಪಡೆದಿರೋ ವೇಗಿಗಳು. ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್ ವಿಶ್ವಕಪ್ನ ಸ್ಪಿನ್ ವಿಭಾಗದ ಅಸ್ತ್ರಗಳು. ಇನ್ನು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ.
15 ಸದಸ್ಯರ ತಂಡ ಇಂತಿದೆ : ವಿರಾಟ್ ಕೊಹ್ಲಿ ( ನಾಯಕ), ರೋಹಿತ್ ಶರ್ಮಾ (ಉಪನಾಯಕ) ಮಹೇಂದ್ರ ಸಿಂಗ್ ಧೋನಿ, ಕೆ.ಎಲ್ ರಾಹುಲ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಕೇದರ್ ಜಾಧವ್ , ರವೀಂದ್ರ ಜಡೇಜಾ, ವಿಜಯ ಶಂಕರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್ ಕುಲದೀಪ್ ಯಾದವ್, ದಿನೇಶ್ ಕಾರ್ತಿಕ್.
ವರ್ಲ್ಡ್ಕಪ್ಗೆ ಟೀಮ್ ಇಂಡಿಯಾ ಪ್ರಕಟ; ವಿರಾಟ್ ಸಾರಥ್ಯದ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
TRENDING ARTICLES