ಮೈಸೂರು : ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಐಟಿ ಬಿಸಿ ತಟ್ಟಿದೆ. ಮೈಸೂರಿನ ಟಿ.ನರಸೀಪುರದಲ್ಲಿರುವ ದರ್ಶನ್ ಅವರ ಫಾರ್ಮ್ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲವೊಂದು ದಾಖಲೆಗಳನ್ನು ತೆಗದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ದಾಳಿ ನಡೆಸಿದ್ದು ಐಟಿ ಅಧಿಕಾರಿಗಳಲ್ಲ ಚುನಾವಣಾಧಿಕಾರಿಗಳು..!
ನಮ್ಮ ಫಾರ್ಮ್ಹೌಸ್ ಮೇಲೆ ದಾಳಿ ಮಾಡಿದ್ದು ಐಟಿ ಅಲ್ಲ ಎಂದು ಸ್ವತಃ ದರ್ಶನ್ ಅವರೇ ಹೇಳಿದ್ದಾರೆ. ಜೊತೆಗೆ ಫಾರ್ಮ್ಹೌಸ್ಗೆ ಹೋದ್ರೆ ಬೂಸಾ, ಹಿಂಡಿ ಸಿಗುತ್ತೆ. ಇವುಗಳನ್ನು ಬಿಟ್ರೆ ಬೇರೇನೂ ಸಿಗಲ್ಲ ಎಂದು ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದು ಐಟಿ ಅಲ್ಲ…!
TRENDING ARTICLES