Sunday, January 5, 2025

‘ತಿಥಿ’ ಚಿತ್ರವನ್ನೂ ಬಿಡಲಿಲ್ಲ ಮೀ ಟೂ..! ಮೀ ಟೂ ಎಫೆಕ್ಟ್ ಮೂವಿ ಕಿಕ್ ಔಟ್..!

ಸ್ಯಾಂಡಲ್ ವುಡ್  ಸದ್ಯದ ಹಾಟ್ ಟಾಪಿಕ್ ಮೀ ಟೂ. ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಯಾವಾಗ ಲೈಂಗಿಕ ಕಿರುಕುಳ ಆರೋಪ ಮಾಡಿದ್ರೋ ಆಗಿನಿಂದ ಸ್ಯಾಂಡಲ್ ವುಡ್ ನಲ್ಲಿ ಮೀ ಟೂ ಸೌಂಡ್ ಮಾಡ್ತಿದೆ.

ಹಿಂದೆ ಯಾವತ್ತೋ ಮಾಡಿದ್ದ ತಪ್ಪುಗಳು ಇವತ್ತು ‘ಬೆತ್ತಲಾಗೋ’ ಭಯದಲ್ಲಿ ಸಣ್ ಬುದ್ಧಿಯ ದೊಡ್ ಜನ ಇದ್ದಾರೆ.‌ ಇನ್ನು ಕೆಲವರಿಗೆ ತಪ್ಪು ಮಾಡ್ದೇ ಇದ್ರೂ ಯಾರಾದ್ರೂ ಯಾವ್ದೋ ಕಾರಣಕ್ಕೆ ನಮ್ಮನ್ನು ಟಾರ್ಗೆಟ್ ಮಾಡ್ತಾರೋ ಅನ್ನೋ ಆತಂಕ.

2016 ರಲ್ಲಿ ತೆರೆಕಂಡ ‘ತಿಥಿ’ ಸಿನಿಮಾಕ್ಕೂ  ಈಗ ಈ ಮೀ ಟೂ ಬಿಸಿ ಮುಟ್ಟಿದೆ..! ತಿಥಿ ಮೂವಿ ಅಂದ ಕೂಡ್ಲೇ ನೆನಪಾಗೋದು ಗಡ್ಡಪ್ಪ ಮತ್ತು ಸೆಂಚುರಿ ಗೌಡ. ಹಾಗಾಂತ ಇವ್ರಿಗೂ ಮೀ ಟೂ ಗೂ ಸಂಬಂಧವಿಲ್ಲ ಬಿಡಿ.

ಮೀ ಟೂ ಬಿಸಿ ತಟ್ಟಿರೋದು ಸ್ಕ್ರೀನ್ ಪ್ಲೇ ರೈಟರ್ ಈರೇಗೌಡ ಅವ್ರಿಗೆ. ‘ಬಳೆಕೆಂಪು’ ಅನ್ನೋ ಸಿನಿಮಾದ ವೇಳೆ ಯುವತಿಯೊಬ್ಬಳಿಗೆ ಈರೇಗೌಡ ಕಿರುಕುಳ ಕೊಟ್ಟಿರೋ ಆರೋಪ ಕೇಳ್ಬಂದಿದೆ.

#MeToo ಅಡಿ ಫೇಸ್ ಬುಕ್ ನಲ್ಲಿ ಯುವತಿ ಈರೇಗೌಡ ನೀಡಿದ್ದ ಕಿರುಕುಳದ ಬಗ್ಗೆ ಬರ್ಕೊಂಡಿದ್ದಾರೆ. ಈರೇಗೌಡ ವಿರುದ್ಧ ಈ ಆರೋಪ ಕೇಳಿಬಂದಿರೋದ್ರಿಂದ, ಇವ್ರ , ‘ಬಳೆಕೆಂಪು’ ಸಿನಿಮಾ ನವೆಂಬರ್ ನಲ್ಲಿ ನಡೆಯಲಿರೋ ಧರ್ಮಶಾಲಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಿಂದ ಕಿಕ್ ಔಟ್ ಆಗಿದೆ. ಅಷ್ಟೇ ಅಲ್ದೆ ಈರೇಗೌಡಗೂ ಫೆಸ್ಟಿವಲ್ ಗೆ ಪ್ರವೇಶ ಇಲ್ಲದಾಗಿದೆ.‌

RELATED ARTICLES

Related Articles

TRENDING ARTICLES