Wednesday, January 8, 2025

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಯಾವ ಜಿಲ್ಲೆ ಫಸ್ಟ್, ಯಾವ್ದು ಲಾಸ್ಟ್..? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್..!

ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಮತ್ತು ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ.
ಪ್ರತಿಬಾರಿಯಂತೆ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ದ್ವಿತೀಯ, ಕೊಡಗು ತೃತೀಯ ಸ್ಥಾನದಲ್ಲಿದೆ. ಉತ್ತರ ಕನ್ನಡ, ಚಿಕ್ಕಮಗಳೂರಿಗೆ ನಂತರದ ಸ್ಥಾನಗಳಲ್ಲಿವೆ. ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಯಲ್ಲಿ ಶೇ. 61.73 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಬರೋಬ್ಬರಿ 98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 15 ಸರ್ಕಾರಿ ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.2.17ರಷ್ಟು ಫಲಿತಾಂಶ ಹೆಚ್ಚಳವಾಗಿದೆ.
ಕಲಾ ವಿಭಾಗದಲ್ಲಿ ಶೇ.50.53, ವಾಣಿಜ್ಯ ವಿಭಾಗದಲ್ಲಿ ಶೇ.66.39, ವಿಜ್ಞಾನ ವಿಭಾಗದಲ್ಲಿ ಶೇ. 66.58 ಫಲಿತಾಂಶ ಬಂದಿದೆ.
ಜಿಲ್ಲಾವಾರು ಫಲಿತಾಂಶ
ಉಡುಪಿ- 92.20
ದಕ್ಷಿಣ ಕನ್ನಡ-90.91
ಕೊಡಗು-83.31
ಉತ್ತರ ಕನ್ನಡ-79.59
ಚಿಕ್ಕಮಗಳೂರು-76.42
ಹಾಸನ –75.19
ಬಾಗಲಕೋಟೆ-74.26
ಬೆಂಗಳೂರು ದಕ್ಷಿಣ-74.25
ಶಿವಮೊಗ್ಗ-73.54
ಬೆಂಗಳೂರು ಗ್ರಾಮಾಂತರ-72.91
ಬೆಂಗಳೂರು ಉತ್ತರ-72.68
ಚಾಮರಾಜನಗರ-72.67
ಚಿಕ್ಕಬಳ್ಳಾಪುರ-70.11
ವಿಜಯಪುರ-68.55
ಮೈಸೂರು-68.55
ಹಾವೇರಿ-68.40
ತುಮಕೂರು-65.81
ಕೋಲಾರ-65.19
ಬಳ್ಳಾರಿ-64.87
ಕೊಪ್ಪಳ-63.15
ಮಂಡ್ಯ-63.08
ದಾವಣಗೆರೆ-62.53
ಧಾರವಾಡ-62.49
ಚಿಕ್ಕೋಡಿ-60.86
ಗದಗ-57.76
ರಾಯಚೂರು-56.73
ಬೆಳಗಾವಿ-56.18
ಕಲಬುರಗಿ-56-09
ಬೀದರ್-55.78
ಯಾದಗಿರಿ-53.02
ಚಿತ್ರದುರ್ಗ-51.42

RELATED ARTICLES

Related Articles

TRENDING ARTICLES