Wednesday, January 15, 2025

ಮಂಡ್ಯ ಅಖಾಡದಲ್ಲಿ ‘ಆಡಿಯೋ’ ಆಟ – ವೈರಲ್​ ಆದ ಮತ್ತೊಂದು ಆಡಿಯೋದಲ್ಲಿ ಏನಿದೆ?

ಮಂಡ್ಯ : ಲೋಕಸಭಾ ಚುನಾವಣೆಗೆ ಇನ್ನೇನು ಮೂರು ದಿನ ಇದೆ. ಈ ನಡುವೆ ಮಂಡ್ಯದಲ್ಲಿ ‘ಆಡಿಯೋ’ ಆಟ ಜೋರಾಗಿದೆ..! ಜೆಡಿಎಸ್​ಗೆ ಸಂಬಂಧಿಸಿದ್ದು ಎನ್ನಲಾದ ಮತ್ತೊಂದು ಆಡಿಯೋ ಈಗ ವೈರಲ್ ಆಗಿದೆ. ಸಂಸದ ಶಿವರಾಮೇಗೌಡ ಡಾನ್​ ರಮೇಶ್ ಎಂಬುವವರ ಜೊತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಅದಾಗಿದ್ದು, ಮಂಡ್ಯ ಪ್ರಚಾರಕ್ಕೆ ಬೆಂಗಳೂರಿನಿಂದ ಜನರನ್ನು ಕರೆತರಲು ನಡೆಸಿರೋ ಪ್ಲಾನ್​ ಸಂಭಾಷಣೆಯಲ್ಲಿದೆ..!
ಪ್ರಚಾರಕ್ಕೆ ಬರೋ ಪ್ರತಿಯೊಬ್ಬರಿಗೂ 500 ರೂಪಾಯಿ ನೀಡುವ ಬಗ್ಗೆ ಆ 43 ಸೆಕೆಂಡ್​ಗಳ ಆಡಿಯೋದಲ್ಲಿದೆ.
ಆಡಿಯೋದಲ್ಲಿ ಏನಿದೆ? 
ಶಿವರಾಮೇಗೌಡ: ಹೇಳಿ ರಮೇಶಣ್ಣ
ರಮೇಶ್: ಅಣ್ಣ, ನಾವು ಯಾವಾಗಿಂದ ಬರ್ಬೇಕಣ್ಣ, ಕ್ಯಾನ್ವಾಸ್ ಗೆ ಅಣ್ಣ.
ಶಿವರಾಮೇಗೌಡ: ಯಾರ್ ಮಾತಾಡ್ತ ಇರೋದು?
ರಮೇಶ್: ಅಣ್ಣ ನಾನೇ ರಮೇಶ ಅಣ್ಣ, ರಮೇಶನೇ
ಶಿವರಾಮೇಗೌಡ: ನಮ್ಮ ಡಾನ್?
ರಮೇಶ್: ಹು, ಅಣ್ಣ
ಶಿವರಾಮೇಗೌಡ: ನಾಳೆಯಿಂದಲೇ…
ರಮೇಶ್: ಹ.. ಹಹಹ, ಅಣ್ಣ ಬೆಂಗಳೂರಿನವರನೆಲ್ಲಾ ಕರ್ಕೊಂಡು ಬರಬೇಕು ಹೆಂಗೆ ಮಾಡೋದು ವ್ಯವಸ್ಥೆ?
ಶಿವರಾಮೇಗೌಡ: ಎಲ್ಲಾ ಎಲ್ಲಾ 500 ರೂಪಾಯಿ ಕೊಡ್ತೀವಿ ತಲೆಗೆ… ಕರ್ಕೊಂಡು ಬಾ..!
ರಮೇಶ್: ಎಲ್ಲರನ್ನೂ ಕರ್ಕೊಂಡು ಬರ್ಲಾ?
ಶಿವರಾಮೇಗೌಡ: ಓ.. ಎಲ್ಲಾ ಬರ್ಬೇಕು
ರಮೇಶ್: ಬರ್ತಾರಣ್ಣ, ಗಂಗನಹಳ್ಳಿ, ಕೆಂಗನಹಳ್ಳಿಯಿಂದ ಸುಮಾರು ಜನ ಇದ್ದಾರೆ. ಬಸ್ಸುಗಳ ವ್ಯವಸ್ಥೆ.. ಬಸ್ಸುಗಳ ವ್ಯವಸ್ಥೆ ನಾವೇ ಮಾಡ್ಕೋಬೇಕಣ್ಣ?
ಶಿವರಾಮೇಗೌಡ: ನೀವೇ ಮಾಡ್ಕೊಂಡ್ ಬನ್ನಿ ದುಡ್ಡು ಕೊಡ್ತೀನಿ. ಒಂದು ತಲೆಗೆ 500 ರೂಪಾಯಿ. ಎಲ್ಲಾ ಅಪ್ಪಾಜಿಗೌಡಂಗೆ ಜವಾಬ್ದಾರಿ ಕೊಟ್ಟಿದ್ದಿವಿ.
ರಮೇಶ್: ಅಪ್ಪಾಜಿಗೌಡ್ರಗಣ್ಣ, ಆಯ್ತು ಸರಿ ಅಣ್ಣ, ಸರಿ ಅಣ್ಣ, ಆಯ್ತಣ್ಣ…!

RELATED ARTICLES

Related Articles

TRENDING ARTICLES