Sunday, December 22, 2024

ಚೆನ್ನೈಗೆ 5 ವಿಕೆಟ್​ಗಳ ಭರ್ಜರಿ ಜಯ

ಕೋಲ್ಕತ್ತಾ : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ ಅನ್ನು 5 ವಿಕೆಟ್​ ಗಳಿಂದ ಮಣಿಸಿದೆ.
ಈಡನ್​ ಗಾರ್ಡನ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 161ರನ್ ಮಾಡಿತು. ಕ್ರಿಸ್​ ಲೈನ್​ 82 ರನ್​​ ಗಳಿಸಿ ಕೋಲ್ಕತ್ತಾ ಪರ ಉತ್ತಮ ಬ್ಯಾಟಿಂಗ್ ಮಾಡಿದ್ರು.
162ರನ್​ಗಳ ಗುರಿ ಬೆನ್ನತ್ತಿದ ಚೆನ್ನೈ 19.4 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಚೆನ್ನೈ ಪರ ಸುರೇಶ್​ ರೈನಾ ಅಜೇಯ 58, ರವೀಂದ್ರ ಜಡೇಜ ಅಜೇಯ 31ರನ್​ ಗಳಿಸೋ ಮೂಲಕ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

RELATED ARTICLES

Related Articles

TRENDING ARTICLES