Monday, January 20, 2025

ಇದು ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ..! ನಿಖಿಲ್​ ಗೆಲುವಿಗೆ ಜೆಡಿಎಸ್​​ ಮಾಡ್ತಿರೋ ಖರ್ಚು ಎಷ್ಟು ಗೊತ್ತಾ?

ಮಂಡ್ಯ : ಇದು ಇಡೀ ದೇಶದ ಗಮನ ಸೆಳೆದಿರೋ ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ. ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರ ಗೆಲುವಿಗಾಗಿ ಜೆಡಿಎಸ್​​ ಮಾಡ್ತಿರೋ ಖರ್ಚು ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ..!
ನಿಖಿಲ್​ ಕುಮಾರಸ್ವಾಮಿ ಗೆಲುವಿಗಾಗಿ ಜೆಡಿಎಸ್​​ ಬರೋಬ್ಬರಿ 150ಕೋಟಿ ಖರ್ಚು ಮಾಡುತ್ತಿದೆಯಂತೆ..! ಪ್ರತಿ ಬೂತ್​ಗೆ 5 ಲಕ್ಷ ಬಟವಾಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2800 ಬೂತ್​ಗಳಿವೆ..ಹೀಗೆ 150 ಕೋಟಿ  ರೂ ಹೆಚ್ಚು ಹಣವನ್ನು ಖರ್ಚು ಮಾಡಿ ನಿಖಿಲ್ ಗೆಲುವಿಗೆ ಪಣ ತೊಟ್ಟಿದೆ ಜೆಡಿಎಸ್..!
ಹಣ ಮಾತ್ರವಲ್ಲದೆ ಊರೂರಲ್ಲಿ ಮಟನ್ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಇದಲ್ಲದೆ ನಿಖಿಲ್​ ಗೆಲುವಿನ ಹೊಣೆಯನ್ನು ಕಂಟ್ರಾಕ್ಟರ್​ಗಳಿಗೆ ವಹಿಸಲಾಗಿದೆ ಅಂತೆ. ಪ್ರತಿ ಕಿಲೋಮೀಟರ್​ಗೆ ಒಬ್ಬರಂತೆ ಕಂಟ್ರಾಕ್ಟರ್​ ನೇಮಕ ಮಾಡಲಾಗಿದ್ದು, ಚುನಾವಣೆ ಬಳಿಕ ಕಂಟ್ರಾಕ್ಟರ್​ಗಳಿಗೆ ಕೋಟಿ ಕೋಟಿ ಅನುದಾನ ನೀಡುವುದಾಗಿ ಮಾತು ಕೊಡಲಾಗಿದೆ ಅನ್ನೋದು ತಿಳಿದುಬಂದಿದೆ.
ಇದು ಸಂಸದ ಶಿವರಾಮೇಗೌಡ ಅವರ ಪುತ್ರ ಚೇತನ್​ ಗೌಡ, ರಮೇಶ್ ಎನ್ನುವವರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ನಿನ್ನೆಯಷ್ಟೇ ನಡೆದಿರೋ ದೂರವಾಣಿ ಸಂಭಾಷಣೆ ಇದಾಗಿದೆ.

RELATED ARTICLES

Related Articles

TRENDING ARTICLES