ಬೆಂಗಳೂರು: ಯಡಿಯೂರಪ್ಪ ಅವರ ಡೈರಿ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಯಡಿಯೂರಪ್ಪ ಅಸಲಿ ಡೈರಿ ಬಿಡುಗಡೆ ಮಾಡೋದಾಗಿ ವಿನಯ್ ಹೇಳಿದ್ದಾರೆ. ಈ ಹಿನ್ನೆಲೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ಭದ್ರತೆ ಒದಗಿಸುವಂತೆ ಕೋರಿದ್ದಾರೆ. ಈ ಹಿಂದೆ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿ ವಿನಯ್ ಅವರು ವಕೀಲರೊಂದಿಗೆ ಬಂದು, ಪ್ರಾಣ ಬೆದರಿಕೆ ಇದ್ದು ಗನ್ ಮ್ಯಾನ್ ಒದಗಿಸುವಂತೆ ವಿನಯ್ ಕೋರಿದ್ದಾರೆ.
2017ರಲ್ಲಿ 11 ಜನರಿಂದ ವಿನಯ್ ಅಪಹರಣ ಪ್ರಯತ್ನ ನಡೆದಿತ್ತು. ಸೂಕ್ತ ರಕ್ಷಣೆ ಕೋರಿದ ವಿನಯ್ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದಾರೆ. 2017ರಲ್ಲಿ 11 ಜನರಿಂದ ವಿನಯ್ ಅಪಹರಣ ಯತ್ನ ನಡೆದಿತ್ತು. ಇತ್ತೀಚೆಗೆ ವಿನಯ್ ಕಿಡ್ನಾಪ್ ಕೇಸ್ ಮತ್ತೆ ಸಿಸಿಬಿಗೆ ವರ್ಗಾವಣೆ ಆಗಿದೆ.