ಇಸ್ಲಮಾಬಾದ್: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಂತಿ ಮಾತುಕತೆ ಸುಲಭವಾಗಲಿದೆ ಅಂತ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಮುಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದರೆ ಶಾಂತಿ ಮಾತುಕತೆ ಕಷ್ಟವಾಗುವ ಸಾಧ್ಯತೆ ಇದೆ. ಆದರೆ ಬಿಜೆಪಿ ಕಾಶ್ಮೀರ ವಿಚಾರವಾಗಿ ಬಿಜೆಪಿ ನಡೆಸುವ ಶಾಂತಿ ಮಾತುಕತೆ ಜನರನ್ನು ತಲುಪುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ರಾಯಿಟರ್ಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಅಧಿಕಾರಿಕ್ಕೆ ಬಂದರೆ ಕಾಶ್ಮೀರ ವಿಚಾರದಲ್ಲಿ ಪರಿಹಾರ ಸಿಗಬಹುದು ಎಂದು ಇಮ್ರಾನ್ ಅವರು ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ. ಭಾರತದಲ್ಲಿ ಬಿಜೆಪಿ ಸರ್ಕಾರ ಬಂದ್ರೆ ಒಳ್ಳೆಯದಾಗಬಹುದು. ನರೇಂದ್ರ ಮೋದಿ ಮತ್ತೆ ಪಿಎಂ ಆದ್ರೆ ಮಾತುಕತೆ ಸಾಧ್ಯವಾಗಲಿದೆ. ಬಹುಶಃ ಮೋದಿ ಮರು ಆಯ್ಕೆಯಾದ್ರೆ ಶಾಂತಿ ನೆಲೆಸಬಹುದು. ಬೇರೆ ಪಕ್ಷಗಳು ಸಂಧಾನಕ್ಕೆ ಹಿಂಜರಿಕೆ ತೋರುವ ಸಾಧ್ಯತೆಗಳಿವೆ.