ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ರಾಜ್ಯ ಮಹಿಳಾ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ. ಯುವತಿ, ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಮಹಿಳಾ ಆಯೋಗ ನೋಟಿಸ್ ನೀಡಿತ್ತು. ಇದಕ್ಕೆ ಕ್ಯಾರೇ ಅನ್ನದ ತೇಜಸ್ವಿ ಸೂರ್ಯ ಬಗ್ಗೆ ಮಹಿಳಾ ಆಯೋಗ ಗರಂ ಆಗಿದ್ದು, ತೇಜಸ್ವಿ ಪರ ಹಾಜರಾದ ವಕೀಲರಿಗೆ ಮಹಿಳಾ ಆಯೋಗ ಛೀಮಾರಿ ಹಾಕಿದೆ. ತೇಜಸ್ವಿ ಅವರಿಗೆ ಸೋಮವಾರ ನಾಲ್ಕು ಗಂಟೆಗೆ ಹಾಜರಾಗುವುವಂತೆ ಸೂಚನೆ ನೀಡಲಾಗಿತ್ತು. ಸೋಮವಾರ ಡೆಡ್ಲೈನ್ ನೀಡಿದ್ರೂ ತೇಜಸ್ವಿ ಸೂರ್ಯ ಅವರು ಹಾಜರಾಗಿಲ್ಲ. “ಅವರೇನು ವಿದೇಶದಲ್ಲಿ ಇಲ್ಲ, ಇಲ್ಲೇ ಇದ್ದುಕೊಂಡು ಯಾಕೆ ಬರ್ತಿಲ್ಲ..? ಸಂಜೆಯೊಳಗೆ ಹಾಜರಾಗಲೇಬೇಕು ಎಂದು ತೇಜಸ್ವಿಗೆ ಮಹಿಳಾ ಆಯೋಗ ಎಚ್ಚರಿಕೆ ನೀಡಿದೆ.