ಮಂಡ್ಯ : ಸಚಿವ ಸಿ.ಎಸ್ ಪುಟ್ಟರಾಜು ಅವರ ಜೊತೆ ಮಾತನಾಡಿರುವ ಆಡಿಯೋ ನನ್ನದೇ ಎಂದು ಕಾಂಗ್ರೆಸ್ ಹಿರಿಯ ನಾಯಕ ಜಿ. ಮಾದೇಗೌಡ ಸ್ಪಷ್ಟಪಡಿಸಿದ್ದಾರೆ.
ಆ ಆಡಿಯೋ ನನ್ನದೆ, ಹಣ ಕೊಡದೆ ಯಾರು ಚುನಾವಣೆ ಮಾಡ್ತಾರೆ ಹೇಳಿ? ಪ್ರಚಾರಕ್ಕೆ ಬಂದವರಿಗೆ ಹಣ ಕೊಡಿ ಅಂತ ಕೇಳಿದ್ದೀನಿ. ಪ್ರಚಾರಕ್ಕೆ ಬಂದವರಿಗೆ ತಿಂಡಿ, ಊಟ ಕೊಡಿಸಬೇಕು ಅಲ್ವಾ? ಅದ್ಕೆ ನಮ್ ಸಚಿವ ಪುಟ್ಟರಾಜುಗೆ ಕೇಳ್ದೆ ತಪ್ಪೇನಿದೆ? ಎಂದು ಮಾದೇಗೌಡ್ರು ಪ್ರಶ್ನಿಸಿದ್ದಾರೆ.
ಇದರಲ್ಲಿ ನನಗೆ ತಪ್ಪು ಕಾಣಿಸ್ತಾ ಇಲ್ಲ. ಕಾಫಿ ಕೊಡಿಸ್ಬೇಕು, ಊಟ ಕೂಡಿಸ್ಬೇಕು, ಎಣ್ಣೆ ಕೊಡಿಸ್ಬೇಕು ಅಂತ ಕೇಳ್ತಾರೆ. ಇದು ಕಾಮನ್ ಅಗಿದೆ, ಅದಕ್ಕೆ ನಾನ್ ಎಲ್ಲಿಂದ ತಂದ್ ಕೊಡ್ಲಿ. ಜನ ಬೈದರೆ ಬೈಸಿಕೊಳ್ಳಲು ನಾನು ಸಿದ್ದ ಎಂದಿದ್ದಾರೆ.
ಆಡಿಯೋ ನನ್ನದೇ ಅಂದ್ರು ಜಿ.ಮಾದೇಗೌಡ್ರು..!
TRENDING ARTICLES