ಮುಂಬೈ: ಕಾಂಗ್ರೆಸ್ ಪಕ್ಷ ಟೈಟಾನಿಕ್ನಂತೆ ಮುಳುಗಲಿದ್ದು, ಅದು ಶಾಶ್ವತವಾಗಿ ಇಲ್ಲದಾಗುವ ದಿನ ದೂರವಿಲ್ಲ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದ ನಂದೆಡ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ನ ಸ್ಥಿತಿ ಟೈಟಾನಿಕ್ಗಿಂತ ಭಿನ್ನವಿಲ್ಲ. ದಿನ ಹೋದಂತೆ ಪಕ್ಷ ಮುಳುಗುತ್ತಿದೆ” ಅಂತ ಹೇಳಿದ್ರು.
“ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44ಸ್ಥಾನ ಕೆಳಗಿಳಿದಿದೆ. ಈ ಬಾರಿ ಕಾಂಗ್ರೆಸ್ನ ಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ. ಅದಕ್ಕಾಗಿಯೇ ಶರದ್ ಪವಾರ್, ಪ್ರಫುಲ್ ಪಟೇಲ್, ರಾಜೀವ್ ಸತವ್ ಸೇರಿ ಹಲವು ನಾಯಕರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇತ್ತೀಚೆಗೆ ತಮ್ಮ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ರ್ಯಾಲಿ ಸಂಪೂರ್ಣ ವಿಫಲವಾಗಿತ್ತು. ಒಂದೇ ಒಂದು ಪಕ್ಷದ ಬಾವುಟ ಕಂಡು ಬರಲಿಲ್ಲ. ಹಾಗಾಗಿ ರಾಹುಲ್ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಇರುವಂತಹ ಕ್ಷೇತ್ರವನ್ನು ಮೈಕ್ರೋಸ್ಕೋಪ್ ಇಟ್ಟು ಹುಡುಕುವಂತಾಗಿದೆ” ಅಂತ ಹೇಳಿದ್ರು.