ಮಂಡ್ಯ: ನಾಡಿನೆಲ್ಲೆಡೆ ಯುಗಾದಿ ಸಂಭ್ರಮ ಮನೆ ಮಾಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮತದಾರರ ಜೊತೆ ಚಾಂದ್ರಮಾನ ಯುಗಾದಿಯನ್ನು ಆಚರಿಸಲಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸಿದ್ದು, ಮಂಡ್ಯ ಕಣದಲ್ಲಿ ಚುನಾವಣೆ ರಂಗೇರಿದೆ. ಹಬ್ಬದಲ್ಲೂ ಚುನಾವಣಾ ಪ್ರಚಾರದಲ್ಲಿ ಸುಮಲತಾ ಫುಲ್ ಬ್ಯುಸಿಯಾಗಿರಲಿದ್ದಾರೆ. ಮಂಡ್ಯದ 18 ಹಳ್ಳಿಗಳಲ್ಲಿ ಸುಮಲತಾ ಪ್ರಚಾರ ನಡೆಸಲಿದ್ದು, ಮಧ್ಯಾಹ್ನ 12 ಗಂಟೆಗೆ ಜೀಗುಂಡಿ ಪಟ್ಟಣದಿಂದ ಪ್ರಚಾರಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 8.30ಕ್ಕೆ ಹುನುಗನಹಳ್ಳಿಯಲ್ಲಿ ಪ್ರಚಾರ ಅಂತ್ಯಗೊಳಿಸಲಿದ್ದಾರೆ. ಯುಗಾದಿ ಪ್ರಯುಕ್ತ ನಟ ದರ್ಶನ್ ಹಾಗೂ ಯಶ್ ಅವರು ಇಂದು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ.