ಕಾರವಾರ: ನಿಖಿಲ್ ತಂಗಿದ್ದ ಹೋಟೆಲ್ ಮೇಲೆ ಐಟಿ ದಾಳಿ ನಡೆಸಿದ್ದಾರೆ ಅಂತ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ. “ಚುನಾವಣೆ ಅಧಿಕಾರಿಗಳು ದಾಳಿ ಮಾಡಲು ಹೊರಟಿದ್ದಾರೆ. 2 ದಿನಗಳಿಂದ ಕೆಆರ್ಎಸ್ ಬಳಿ ಹೋಟೆಲ್ನಲ್ಲಿ ನಿಖಿಲ್ ತಂಗಿದ್ದರು. ಮುಂಜಾನೆಯಿಂದ ನಿರಂತರವಾಗಿ ನನ್ನ ವಾಹನ ತಪಾಸಣೆ ಮಾಡಲಾಗುತ್ತಿದೆ. ಎದುರಾಳಿ ಅಭ್ಯರ್ಥಿಯನ್ನ ಯಾರೂ ಕೇಳುತ್ತಿಲ್ಲ. ಅವರ ಹಿಂದೆ ನೂರಾರು ವಾಹನಗಳು ಹೋಗುತ್ತಿವೆ. ಯಾವ ಅಧಿಕಾರಿಗಳೂ ಕೂಡ ತಪಾಸಣೆ ನಡೆಸುತ್ತಿಲ್ಲ” ಅಂತ ಹೇಳಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಅವರು, “ಹೊರಗಡೆಯಿಂದ ಜನ ಕರೆತಂದು ಚುನಾವಣೆ ನಡೆಸುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ಮಾಡಬೇಕು” ಅಂತ ಹೇಳಿದ್ದಾರೆ.