ಜೈಪುರ : ರಾಯಲ್ ಚಾಲೆಂಜರ್ಸ್ ಬೆಂಗಳೂರು 12ನೇ ಆವೃತ್ತಿಯ ತನ್ನ 4ನೇ ಮ್ಯಾಚ್ನಲ್ಲೂ ಸೋಲುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಕಳೆದ 3 ಮ್ಯಾಚ್ಗಳಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್ ಆರ್ಸಿಬಿ ಎದುರು 7 ವಿಕೆಟ್ಗಳ ಗೆಲುವು ಪಡೆದು ಪ್ರಸಕ್ತ ಆವೃತ್ತಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದೆ.
‘ಸೋತವರ ಕಾಳಗ’ಕ್ಕೆ ಸಾಕ್ಷಿಯಾಗಿದ್ದ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ನಲ್ಲಿ ಟಾಸ್ ಗೆದ್ದ ಅತಿಥೇಯ ರಾಜಸ್ಥಾನ್ ರಾಯಲ್ಸ್ ಪ್ರವಾಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ (23), ಪಾರ್ಥಿವ್ ಪಟೇಲ್ (67) 49ರನ್ಗಳ ಆರಂಭಿಕ ಜೊತೆಯಾಟವನ್ನು ನೀಡಿದರು. ತಂಡದ ಮೊತ್ತ 49 ಆಗಿದ್ದಾಗ ವಿರಾಟ್ ಪೆವಿಲಿಯನ್ ಸೇರಿದರು. ನಂತರ ಬಂದ ಎ.ಬಿ ಡಿವಿಲಿಯರ್ಸ್ (13) ಮತ್ತು ಹೆಟ್ಮೇರ್ (1) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಸ್ಟೋಯಿನ್ಸ್ ಅಜೇಯ 31, ಮೊಯಿನ್ ಅಲಿ ಅಜೇಯ 18ರನ್ ಮಾಡಿದರು. ಅಂತಿಮವಾಗಿ ಆರ್ಸಿಬಿ ತನ್ನ ಪಾಲಿನ 20 ಓವರ್ಗಳಲ್ಲಿ 4 ವಿಕೆಟ್ಗೆ ಕೇವಲ 158ರನ್ಗಳಿಸಿತು.
ಆರ್ಆರ್ ಕೊನೆಯ ಎಸೆತದಲ್ಲಿ ಗೆಲುವಿನ ಕೇಕೆ ಹಾಕಿತು. ಕ್ಯಾಪ್ಟನ್ ಅಜಿಂಕ್ಯ ರಹಾನೆ 22, ಜೋಸ್ ಬಟ್ಲರ್ 59 ರನ್ಗಳಿಸಿ ಉತ್ತಮ ಆರಂಭ ನೀಡಿ ಪೆವಿಲಿಯನ್ ಸೇರಿದ್ರು. ಸ್ಟೀವನ್ ಸ್ಮಿತ್ 38 ರನ್ ಕೊಡುಗೆ ನೀಡಿದ್ರು. ರಾಹುಲ್ ತ್ರಿಪತಿ ಅಜೇಯ 34, ಸ್ಟ್ರೋಕ್ ಅಜೇಯ 1ರನ್ ಗಳಿಸಿ ಗೆಲುವಿನ ದಡ ಸೇರಿಸಿ ಸಂಭ್ರಮಿಸಿದ್ರು.