Saturday, December 21, 2024

ಆರ್​ಸಿಬಿಗೆ ಸತತ 3ನೇ ಸೋಲು..!

ಹೈದರಾಬಾದ್ : ರಾಯಲ್​ ಚಾಲೆಂಜರ್ಸ್ ಬೆಂಗಳೂರು ಸತತ 3ನೇ ಮ್ಯಾಚ್​ನಲ್ಲೂ ಸೋಲುಂಡು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.
ರಾಜೀವ್​ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಸನ್​ರೈಸರ್ಸ್ ಹೈದರಾಬಾದ್ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್​​ಗೆ ಇಳಿದ ಹೈದರಬಾದ್​ ಜಾನಿ ಬೈರ್​ಸ್ಟ್ರೋ (114) ಮತ್ತು ಡೇವಿಡ್​ ವಾರ್ನರ್ (ಅಜೇಯ 100) ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್​ ನಷ್ಟಕ್ಕೆ ಬರೋಬ್ಬರಿ 231ರನ್​ ಗಳಿಸಿತು.
ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ತನ್ನ ಪಾಲಿನ 20 ಓವರ್ ಗಳಲ್ಲಿ ಇನ್ನೂ 1 ಎಸೆತ ಬಾಕಿ ಇರುವಂತೆಯೇ ಕೇವಲ 113ರನ್​ ಗಳಿಗೆ ಆಲ್​ಔಟ್​ ಆಯ್ತು.

RELATED ARTICLES

Related Articles

TRENDING ARTICLES