ನವದೆಹಲಿ : ಸಮಾಜಕ್ಕಾಗಿ ದುಡಿಯುವ ಎಲ್ಲರೂ ಚೌಕಿದಾರರು. ಚೋರಿ ಮಾಡುವವರು ಚೌಕಿದಾರರು ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯಲ್ಲಿ ಮೈ ಭೀಚೌಕಿದಾರ್ ಸಂವಾದದಲ್ಲಿ ಮಾತನಾಡಿದ ಅವರು, ನಾವು ತೆರಿಗೆದಾರರ ದುಡ್ಡನ್ನ ಕೊಳ್ಳೆ ಹೊಡೆಯೋರನ್ನ ಬಿಡೋದಿಲ್ಲ. ನಾನು ಸಿಎಂ ಆಗಿದ್ದಾಗ ಸಾಕಷ್ಟ ಟೀಕೆಗಳು ಕೇಳಿಬಂದಿದ್ದವು. ಈ ಟೀಕೆಗಳೇ ನನ್ನನ್ನ ಈ ಮಟ್ಟಕ್ಕೆ ಬೆಳೆಸಿದೆ. ಚೌಕಿದಾರ್ ಅಂದ್ರೆ ಒಂದು ಭಾವನೆ ಅಷ್ಟೇ. ಚೌಕಿದಾರ್ ವ್ಯವಸ್ಥೆಯಲ್ಲಿ ಇರೋದಿಲ್ಲ ಎಂದು ಹೇಳಿದರು.
ಚೌಕಿದಾರ್‌ಗೆ ಯೂನಿಫಾರ್ಮ್ ಇರೋದಿಲ್ಲ. ನಾವೆಲ್ಲಾ ಈ ದೇಶದ ಚೌಕಿದಾರಗಳು. ಸಮಾಜಕ್ಕಾಗಿ ದುಡಿಯುವ ಎಲ್ಲರೂ ಚೌಕಿದಾರರು. ಚೋರಿ ಮಾಡುವವರು ಚೌಕಿದಾರರು ಅಲ್ಲ. ದೇಶದ ಪ್ರತಿಯೊಬ್ಬರು ಚೌಕಿದರರು ಆಗಬೇಕು. ಕೆಲಸ ಮಾಡುವ ಎಲ್ಲರೂ ಚೌಕಿದಾರರೇ .ಕಳ್ಳರು ಚೌಕಿದಾರರು ಅಲ್ಲ. ನಾನು ಇಲ್ಲಿ ಬಡವರನ್ನ ರಕ್ಷಣೆ ಮಾಡೋದಕ್ಕೆ ನಿಂತಿದ್ದೇನೆ. ನಾವೆಲ್ಲಾ ಒಂದಾದ್ರೆ ದೇಶವನ್ನ ಕೊಳ್ಳೆ ಹೊಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಎನ್‌ಡಿಎ ಸರ್ಕಾರದ ಅವಧಿಯಲ್ಲಿ ತೆರಿಗೆದಾರರ ಸಂಖ್ಯೆ ದ್ವಿಗುಣವಾಗಿದೆ. ಭಾರತಕ್ಕೆ ಚೌಕಿದಾರರು ಬೇಕು. ರಾಜರು ಅಲ್ಲ. ಕೆಲ ರಾಜ ಮಹಾರಾಜರಿಗೆ ಭಯ ಶುರುವಾಗಿದೆ. ನಿಮಗೆ ಫೈವ್ ಸ್ಟಾರ್ ರಾಜಕಾರಣಿಗಳು ಬೇಕಾ? ನಾವು ಲೂಟಿದಾರರನ್ನ ಜೈಲಿಗೆ ಕಳುಹಿಸುತ್ತೇವೆ. 2019ರ ಚುನಾವಣೆ ನಂತ್ರ ಜೈಲಿನ ಕಂಬಿಗಳ ಹಿಂದೆ ತಳ್ಳುತ್ತೇವೆ. ಲೂಟಿದಾರರನ್ನ ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಭ್ರಷ್ಟಾಚಾರಿಗಳು ಈಗ ಭಯಗೊಂಡಿದ್ದಾರೆ. ಭ್ರಷ್ಟಾಚಾರಿಗಳು ಈಗ ನಡಗುತ್ತಿದ್ದಾರೆ ವಿಪಕ್ಷಗಳ ಮುಖಂಡರಿಗೆ ಟಾಂಗ್ ನೀಡಿದರು.
ದೇಶದಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಲಿನಿಂದ ಅಭಿವೃದ್ಧಿಯಾಗಿಲ್ಲ. ಭಾರತ ಸಮೃದ್ಧ ದೇಶವಾಗುವ ದೇಶವಾಗುತ್ತೆ. ಕರ್ನಾಟಕದಲ್ಲಿ ಆರ್ಥಿಕ ಖಾತೆಯನ್ನ ನಿಭಾಯಿಸಿದ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತಿದ್ದಾರೆ. ಕೆಲವರು ಸಂಸತ್‌ನಲ್ಲಿ ಬರೀ ಭಾಷಣ ಮಾಡ್ತಾರೆ. ನಮ್ಮ ಸರ್ಕಾರ ಬಂದ ಮೇಲೆ ನಾವು 11ನೇ ಸ್ಥಾನದಲ್ಲಿ ಇದ್ದೀವಿ. 2104ರಿಂದಲೇ ಭ್ರಷ್ಟರ ಬೇಟೆ ಆರಂಭಿಸಿದ್ದೇವೆ ಎಂದರು.
ಸಮಾಜಕ್ಕಾಗಿ ದುಡಿಯುವ ಎಲ್ಲರೂ ಚೌಕಿದಾರರು : ಪ್ರಧಾನಿ ಮೋದಿ
TRENDING ARTICLES