ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಸುಮಲತಾ ಮನೆಯಲ್ಲಿ ಸುದ್ದಿಗೋಷ್ಠಿ ನಡೆದಿದ್ದು ಸುಮಲತಾ ಅಂಬರೀಶ್ ನಡೆ ಕುತೂಹಲ ಮೂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅವರು, “ನಾಮಪತ್ರ ಗೊಂದಲದ ಬಗ್ಗೆ 2 ಗಂಟೆ ವಿಡಿಯೋ ಫುಟೇಜ್ ಕೊಡಿ ಅಂತಾ ಕೇಳಿದೆ. ವಿಡಿಯೋ ಎಕ್ಯೂಪ್ಮೆಂಟ್ನ್ನು ಮದುವೆ ಸಮಾರಂಭಕ್ಕೆ ಕಳುಹಿಸಿದೆ ಅಂತಾ ಹೇಳಿದ್ರು. ಡಿಸಿ ಅವರು ಮದುವೆ ಸಮಾರಂಭಕ್ಕೆ ಕಳುಹಿಸುವ ಅವಶ್ಯಕತೆ ಏನಿತ್ತು ” ಅಂತ ಪ್ರಶ್ನಿಸಿದ್ದಾರೆ. “ಚುನಾವಣಾ ಚಿಹ್ನೆಯನ್ನು ನೀಡುವಲ್ಲಿ ಅಧಿಕಾರ ದುರುಪಯೋಗವಾಗ್ತಿದೆ. ನನ್ನ ಹೆಸರಿನ ಮೇಲೆ ಒಂದು ಸುಮಲತಾ ಹೆಸರು ಇದೆ. ನನ್ನ ಹೆಸರಿನ ಕೆಳಗೆ ಎರಡು ಸುಮಲತಾ ಅವರ ಹೆಸರಿದೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಮಲತಾ ಚುನಾವಣಾ ಏಜೆಂಟ್ ಮದನ್ ಮಾತನಾಡಿ, “ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಅಬ್ಜೆಕ್ಷನ್ ರೈಸ್ ಮಾಡಿದ್ವಿ. ನಾಮಪತ್ರದಲ್ಲಿನ ದೋಷದ ಬಗ್ಗೆ ಮಾಹಿತಿ ನೀಡಿದ್ದೆವು. ಅಧಿಕಾರಿಗಳ ಸೂಚನೆ ಮೇರೆಗೆ ನಾನು ಲಿಖಿತ ರೂಪದಲ್ಲಿ ಅರ್ಜಿ ನೀಡಿದೆ”. ಅಂತಾ ಕೇಳಿದೆ