ಹೈದರಾಬಾದ್ : ಡೇವಿಡ್ ವಾರ್ನರ್ ಅವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ ಗೆಲುವಿನ ನಗೆ ಬೀರಿದೆ.
ಹೈದರಾಬಾದ್ ನಲ್ಲಿ ನಡೆದ ಮ್ಯಾಚ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಆರ್ ನಾಯಕ ಅಜಿಂಕ್ಯ ರಹಾನೆ ಅರ್ಧಶತಕ (70) ಮತ್ತು ಯುವ ಬ್ಯಾಟ್ಸ್ ಮನ್ ಅಬ್ಬರದ ಸಂಜು ಸ್ಯಾಮನ್ ಸೆಂಚುರಿ (55 ಎಸೆತಗಳಲ್ಲಿ ಅಜೇಯ 102) ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 198 ರನ್ ಮಾಡಿತು.
ಸವಾಲಿನ ಗುರಿ ಬೆನ್ನತ್ತಿದ ಹೈದರಾಬಾದ್ ಗೆ ಡೇವಿಡ್ ವಾರ್ನರ್ ( 69) ಮತ್ತು ಜೋನಿ ಬೈರ್ ಸ್ಟೋ (45) 110 ರನ್ ಗಳ ಜೊತೆಯಾಟವಾಡಿ ಉತ್ತಮ ಆರಂಭ ಒದಗಿಸಿದ್ರು.
ನಂತರ ವಿಜಯ್ ಶಂಕರ್ 15 ಎಸೆತಗಳಲ್ಲಿ 3 ಸಿಕ್ಸರ್ 1 ಬೌಂಡರಿ ಸಮೇತ 35 ರನ್ ಗಳಿಸಿ ಗೆಲುವಿನ ಹಾದಿಗೆ ತಂಡವನ್ನು ತಂದರು. ಯೂಸಫ್ ಪಠಾಣ್ (ಅಜೇಯ 16) , ರಶಿದ್ ಖಾನ್ (ಅಜೇಯ 15)ಗೆಲುವಿನ ದಡ ಸೇರಿಸಿದ್ರು. ಇನ್ನೂ 1 ಓವರ್ ಬಾಕಿ ಇರುವಾಗಲೇ 5 ವಿಕೆಟ್ ಜಯ ಸಾಧಿಸಿತು.