ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಸೋಲಿಸಲು ಬಿಜೆಪಿ ‘9’ ರ ರಣತಂತ್ರವನ್ನು ರೂಪಿಸಿದೆ. ಸಂಖ್ಯಾಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ ಅಂತ ತಿಳಿದುಬಂದಿದೆ. ದೇವೇಗೌಡರಿಗೂ ಅಂಕಿ 9ಕ್ಕೂ ಆಗ್ಬರಲ್ಲ ಅನ್ನೋ ಶಾಸ್ತ್ರವನ್ನೇ ನಂಬಿಕೊಂಡು ಬಿಜೆಪಿ ‘ಒಂಬತ್ತರ ಲೆಕ್ಕದಲ್ಲೇ’ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ..!
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜ್ ಅವರು ಇಂದು 9 ಕಾರುಗಳಲ್ಲಿ ಬಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. 9 ಜನ ಪ್ರಮುಖ ಕಾರ್ಯಕರ್ತರು ಮುಂದಾಳತ್ವವಹಿಸಿಕೊಳ್ಳುತ್ತಿದ್ದಾರೆ. ಇಂದು ಏನೇ ಮಾಡಿದ್ರೂ 9ರ ಲೆಕ್ಕಾಚಾರದಲ್ಲೇ ಮಾಡಲು ಬಸವರಾಜ್ ಮತ್ತು ಜಿಲ್ಲಾ ಬಿಜೆಪಿ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಹಾಸನವನ್ನು ಮೊಮ್ಮಗ ಪ್ರಜ್ವಲ್ಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು ಕೊನೇ ಕ್ಷಣದಲ್ಲಿ ತುಮಕೂರಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಅವರು ದೊಡ್ಡಗೌಡರ ವಿರುದ್ಧ ಕಣಕ್ಕಿಳಿಯಲು ನಿರ್ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕೂಡ ಕಣಕ್ಕಿಳಿಯಲು ಡಿಸೈಡ್ ಮಾಡಿದ್ದು, ಕಾಂಗ್ರೆಸ್ನ ಈ ನಾಯಕರ ನಡೆ ದೇವೇಗೌಡ್ರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೈತ್ರಿಯಲ್ಲಿನ ಈ ಜಿದ್ದಾಜಿದ್ದಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರಿಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚಿದೆ.
ದೇವೇಗೌಡ್ರನ್ನು ಮಣಿಸಲು ಬಿಜೆಪಿ ಮಾಡಿರೋ ‘9’ರ ರಣತಂತ್ರವೇನು?
TRENDING ARTICLES