ಬೆಳಗಾವಿ: ಹೆಂಡತಿ ಕಾಟಕ್ಕೆ ಬೇಸತ್ತ ಗಂಡನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ಮೃತ ಯುವಕನನ್ನು ಸುನೀಲ್ ಮೂಲಿಮನಿ ಎಂದು ಗುರುತಿಸಲಾಗಿದೆ.
ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ಘಟನೆ ನಡೆದಿದ್ದು. ಸುನೀಲ್ ಮೂಲಿಮನಿ (33) ತನ್ನದೇ ಕಂಪ್ಯೂಟರ್ ಶಾಪ್‌ನಲ್ಲಿ ವೈಯರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು. 4 ವರ್ಷಗಳ ಹಿಂದೆ ಪೂಜಾ ಎಂಬಾಕೆಯನ್ನ ಸುನೀಲ್ ಮದುವೆಯಾಗಿದ್ದರು. ಈಗ ದಂಪತಿಗೆ ಮೂರು ವರ್ಷದ ಮಗು ಇದೆ. ಇದನ್ನೂ ಓದಿ: ‘ಹಿಂದಿ ಹೇರಿಕೆ ವಿರುದ್ದ ನಾವೆಲ್ಲ ಹೋರಾಡಬೇಕಿದೆ’; ಕಮಲ್ ಪರ ಬ್ಯಾಟ್ ಬೀಸಿದ ನಟಿ ರಮ್ಯ
ಡೆತ್ನೋಟ್ನಲ್ಲಿ ಮೈ ವೈಫ್ ಈಜ್ ರಿಜನ್ ಫಾರ್ ಮೈ ಡೆತ್ ಎಂದು ಬರೆದಿಟ್ಟು ಸುನೀಲ್ ಮೂಲಿಮನಿ ಆತ್ಮಹತ್ಯೆಗೆ ಶರಣಾಗಿದ್ದು. ಶವವನ್ನು ಮರೋಣತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ :ಕರುಳು ಹಿಂಡುವ ದೃಷ್ಯ; ತಾಯಿ ಮಕ್ಕಳ ಮೇಲೆ ಕುಸಿದು ಬಿದ್ದ ಗೋಡೆ, ರಕ್ಷಣಾಕಾರ್ಯ ಆರಂಭ