ಆಸ್ಟ್ರೇಲಿಯಾದ ಸಂಸದೆ ಫಾತಿಮಾ ಪೇಮನ್ ಅವರಿಗೆ ಸಹ ಸಂಸದರು ಕಿರುಕುಳ ನೀಡಿದ್ದಾರೆ ಎಂಬ ಮಾಹಿತಿಯನ್ನು ಬಿಬಿಸಿ ವರದಿ ಮಾಡಿದ್ದು. ಆಸ್ಟ್ರೇಲಿಯಾ ಸಂಸತ್ಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ಸಂಸದೆಯಾಗಿರುವ ಫಾತಿಮಾಗೆ ಟೇಬಲ್ ಮೇಲೆ ಹತ್ತಿ ನೃತ್ಯ ಮಾಡಿ, ಮಧ್ಯ ಕುಡಿಯುವಂತೆ ಸಹ ಸಂಸದರು ಕಿರುಕುಳ ಕೊಟ್ಟಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.
ಆಸ್ಟ್ರೇಲಿಯಾ ಸಂಸತ್ನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಹದ್ಯೂಗಿಯೊಬ್ಬರು ಫಾತಿಮಾಗೆ ಕಿರುಕುಳ ನೀಡಿ, ಅನುಚಿತವಾಗಿ ವರ್ತಿಸಿದ್ದು. “ನಿಮಗೂ ಕೂಡ ಮದ್ಯ ಕೊಡುತ್ತೇವೆ ಅದನ್ನು ಕುಡಿದು ಟೇಬಲ್ ಮೇಲೆ ಡ್ಯಾನ್ಸ್ ಮಾಡಿ ಎಂದು ಕೆಟ್ಟದಾಗಿ ಹೇಳಿದ್ದಾರೆಂದು ವರದಿಯಾಗಿದೆ. ಇದನ್ನೂ ಓದಿ :‘ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ’; ಅತ್ಯಾಚಾರ ಆರೋಪಿಗೆ ಸುಪ್ರೀಂ ಜಾಮೀನು
ಇನ್ನು ಫಾತಿಮಾ ಅಫ್ಘಾನಿಸ್ತಾನದಲ್ಲಿ ಜನಿಸಿದ್ದು. ಆಸ್ಟ್ರೇಲಿಯಾದ ಸಂಸತ್ತಿನೊಳಗೆ ಹಿಜಾಬ್ ಧರಿಸಿ ಬಂದ ಮೊದಲ ಸಂಸದೆ ಅವರು. ಸ್ವತಂತ್ರ ಸಂಸದೆ ಫಾತಿಮಾ 2024ರಲ್ಲಿ ಎಡಪಂಥೀಯ ಲೇಬರ್ ಸರ್ಕಾರದಿಂದ ಬೇರ್ಪಟ್ಟರು ಮತ್ತು ಗಾಜಾದಲ್ಲಿ ಪ್ಯಾಲೆಸ್ತೀನಿಯನ್ನರಿಗೆ ಸಹಾಯ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆ ಯಾವಾಗ ನಡೆದಿದೆ ಹಾಗೂ ಆ ಸಂಸದ ಯಾರು ಎನ್ನುವ ಕುರಿತು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ :‘ಯಾರ್ ಮನೆ ಹಾಳು ಮಾಡಲು ಈ ರೀತಿ ತೆರಿಗೆ ಹಾಕ್ತಿದ್ದೀರಾ’; ಸರ್ಕಾರದ ವಿರುದ್ದ ಆರ್.ಅಶೋಕ್ ಆಕ್ರೋಶ
2021ರಲ್ಲಿ ಬ್ರಿಟಾನಿ ಹಿಗ್ಗಿನ್ಸ್ ಎಂಬುವವರು ಸಂಸದೀಯ ಕಚೇರಿಯೊಳಗೆ ಸಹೋದ್ಯೋಗಿಯಿಂದ ಅತ್ಯಾಚಾರಕ್ಕೊಳಗಾಗಿದ್ದರು. ದೇಶಾದ್ಯಂತ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು. ನಂತರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಮದ್ಯಪಾನ, ಬೆದರಿಕೆ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಪ್ರಚಲಿತದಲ್ಲಿವೆ.