Friday, May 30, 2025

73 ವರ್ಷದ ವೃದ್ದೆಯನ್ನು ಮದುವೆಯಾಗುವುದಾಗಿ ನಂಬಿಸಿ 57 ಲಕ್ಷ ವಂಚನೆ

ಥಾಣೆ: ಮಹಾರಾಷ್ಟ್ರದಲ್ಲಿ 73 ವರ್ಷದ ವೃದ್ಧೆಯೊಬ್ಬರಿಗೆ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ 57 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದಾನೆ. ಪತ್ರಿಕೆಯಲ್ಲಿ ಬಂದಿದ್ದ ಜಾಹೀರಾತನ್ನ ನೋಡಿ ಮಹಿಳೆಯೊಂದಿಗೆ ಪರಿಚಯ ಬೆಳೆಸಿದ್ದ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.

ಮಹರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು. ಪೊಲೀಸರ ವಿವರಗಳ ಪ್ರಕಾರ, ಮಹಿಳೆ ಡೊಂಬ್ಲಿವ್ಲಿ ಪ್ರದೇಶದ ನಾನಾ ಶಂಕರ್ ಸೆಟ್ ರಸ್ತೆಯಲ್ಲಿರುವ ವಸತಿ ಸೊಸೈಟಿಯಲ್ಲಿ ವಾಸಿಸುತ್ತಿದ್ದಾರೆ. ವೈವಾಹಿಕ ಜಾಹೀರಾತು ನೀಡಿದ್ದ 62 ವರ್ಷದ ವ್ಯಕ್ತಿಯನ್ನು ಮಹಿಳೆ ಸಂಪರ್ಕಿಸಿದ್ದಾರೆ ಎಂದು ವಿಷ್ಣು ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿವೇಕ್ ಕುಮುತ್ಕರ್ ಹೇಳಿದ್ದಾರೆ. ಇದನ್ನೂ ಓದಿ :ಸಂಸತ್​ನಲ್ಲಿ ಮುಸ್ಲಿಂ ಸಂಸದೆಗೆ ಕಿರುಕುಳ; ಮಧ್ಯ ಸೇವಿಸಿ, ಟೇಬಲ್​ ಮೇಲೆ ಡ್ಯಾನ್ಸ್​ ಮಾಡುವಂತೆ ಒತ್ತಡ

ಮಹಿಳೆಯೊಂದಿಗೆ ಚೆನ್ನಾಗಿ ಮಾತನಾಡುತ್ತ ವಿಶ್ವಾಸ ಗಳಿಸಿದದ್ದ ವ್ಯಕ್ತಿ, ಆಕೆಯನ್ನು ಮದುವೆಯಾಗಿ ಪುಣೆಯಲ್ಲಿ ಶಾಂತಿಯುತವಾಗಿ ಜೀವನ ನಡೆಸುವುದಾಗಿ ಭರವಸೆ ನೀಡಿದ್ದನು. ಮದುವೆಗೆ ಮುನ್ನ ಪುಣೆಯಲ್ಲಿ ಮನೆ ಖರೀದಿಸುವ ಉದ್ದೇಶವನ್ನು ಅವನು ಆ ಮಹಿಳೆಯ ಬಳಿ ವ್ಯಕ್ತಪಡಿಸಿದನು. ಇದರಂತೆ ಮಹಿಳೆಯ ಬಳಿ ಸುಮಾರು 35 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದನು. ಮನೆ ಖರೀದಿಸಿರುವುದಕ್ಕೆ ಸಾಕ್ಷಿಯಾಗಿ ಕೆಲವು ನಕಲಿ ದಾಖಲೆಗಳನ್ನು ಆಕೆಗೆ ಹಸ್ತಾಂತರಿಸಿದ್ದನು.

ಕೆಲ ವರ್ಷಗಳಿಂದ ಆಕೆಯ ಜೊತೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಆತ. ಮಹಿಳೆಯ ಚಿನ್ನಾಭರಣವನ್ನು ಕದ್ದು ಎಸ್ಕೇಪ್​ ಆಗಿದ್ದಾನೆ. ಸುಮಾರು 20 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗಿದ್ದು. ಜೊತೆಗೆ ಮಹಿಳೆಯ ಕಾರ್ಡ್​ಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ :‘ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ’; ಅತ್ಯಾಚಾರ ಆರೋಪಿಗೆ ಸುಪ್ರೀಂ ಜಾಮೀನು

ಕಳೆದ ತಿಂಗಳು ಮಹಿಳೆಯಿಂದ ಹಣ ಪಡೆದು ವಂಚಿಸಿದ ನಂತರ, ಆರೋಪಿ ಕಣ್ಮರೆಯಾಗಿದ್ದು, ಪ್ರಸ್ತುತ ಪತ್ತೆಯಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಪೊಲೀಸರು ಸೋಮವಾರ ಆ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES