ಬಾಗಲಕೋಟೆ : ಮದುವೆಯಾದ 15 ನಿಮಿಷದಲ್ಲೇ ಯುವಕ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಮೃತ ಯುವಕನನ್ನು 25 ವರ್ಷದ ಪ್ರವೀಣ್ ಕುರಣಿ ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ, ಜಮಖಂಡಿ ನಗರದ ಘಟನೆ ನಡೆದಿದ್ದು. ಕುಂಭಾರ ಹಳ್ಳದ ಗ್ರಾಮದ ನಿವಾಸಿ ಪ್ರವೀಣ್ ಕುರಣಿ ವಿವಾಹ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. ಮದುವೆ ಕೂಡ ಸಂಪನ್ನವಾಗಿತ್ತು, ಆದರೆ ಅಕ್ಷತೆ ಬಿದ್ದ ಹದಿನೈದು ನಿಮಿಷದಲ್ಲೇ ಯುವಕನಿಗೆ ಹೃದಯಘಾತ ಸಂಭವಿಸಿದ್ದು. ವೇದಿಕೆ ಮೇಲೆಯೇ ಪ್ರವೀಣ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ಮೇಧಾವಿ ತರ ಪೋಸ್ ಕೊಡೊ ಸಂತೋಷ್ ಲಾಡ್ ಒಬ್ಬ ತಿಳಿಗೇಡಿ: ಪ್ರತಾಪ್ ಸಿಂಹ ವಾಗ್ದಾಳಿ
ಮದುವೆಯಾಗಿ ಹೊಸಜೀವನ ಆರಂಭಿಸುವ ಮೊದಲೇ ಯುವಕ ಪ್ರವೀಣ್ ಬಾಳ ಬದುಕಿಗೆ ಕೊನೆಯ ವಿದಾಯ ಹೇಳಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಮನೆಯೀಗ ಸೂತಕದ ಮನೆಯಾಗಿ ಮಾರ್ಪಟ್ಟಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ದೊರಕಬೇಕಿದೆ.