Friday, May 9, 2025

ಭಾರತದ ವಿರುದ್ದ ಯುದ್ದ ಮಾಡುವುದು ಮುಸ್ಲಿಂರ ಕರ್ತವ್ಯ: ಭಾರತದ ಮುಸ್ಲಿಮರಿಗೆ ಆಲ್​ಖೈದ ಕರೆ

ಭಾರತ ಮತ್ತು ಪಾಕಿಸ್ತಾನದ ನಡುವೆ ದಿನದಿಂದ ದಿನಕ್ಕೆ ಉದ್ವಿಘ್ನತೆ ಹೆಚ್ಚಾಗುತ್ತಿದ್ದು. ಪಾಕಿಸ್ತಾನದ ಮೇಲೆ ಭಾರತ ನಡೆಸಿರುವ ದಾಳಿಯನ್ನ ಆಲ್​-ಖೈದ ಉಗ್ರಸಂಘಟನೆ ಖಂಡಿಸಿದೆ. ಅಷ್ಟೇ ಅಲ್ಲದೇ ಪ್ರಪಂಚದದ್ಯಂತ ಜಿಹಾದ್​ಗೆ ಕರೆ ನೀಡಲಾಗಿದೆ. ಈ ಕುರಿತುತಾದ ಮಾಧ್ಯಮ ಪ್ರಕಟಣೆಯನ್ನು ಆಲಖೈದ್​ ಹೊರಡಿಸಿದೆ.

ಜಮ್ಮು-ಕಾಶ್ಮೀರದ ಪೆಹಲ್ಗಾಮ್​ನಲ್ಲಿ ನಡೆದ ದಾಳಿಯ ನಂತರ ಅದಕ್ಕೆ ಪ್ರತಿಕಾರವಾಗಿ ಭಾರತ ಕಳೆದ ಮೇ.7ರಂದು ಪಾಕಿಸ್ತಾನದ ಮೇಲೆ ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ದಾಳಿ ನಡೆಸಿತ್ತು. ನಂತರ ಎರಡು ದೇಶಗಳ ನಡುವೆ ಉದ್ವಿಘ್ನತೆ ಹೆಚ್ಚಾಗಿದ್ದು. ಗಡಿಗಳಲ್ಲಿ ದಾಳಿಗೆ ಪ್ರತಿದಾಳಿ ನಡೆಯುತ್ತಿದೆ. ಭಾರತ ನಡೆಸಿರುವ ದಾಳಿಯನ್ನ ಆಲ್​ಖೈದ ಉಗ್ರಸಂಘಟನೆ ಖಂಡಿಸಿದ್ದು, ಜಿಹಾದ್​ಗೆ ಕರೆನೀಡಿದೆ. ಇದನ್ನೂ ಓದಿ :ಗಡಿ ನುಸುಳಲು ಯತ್ನಿಸಿದ 7 ಜೈಷ್​ ಉಗ್ರರನ್ನು ಹೊಡೆದುರುಳಿಸಿದ BSF ಯೋಧರು

ಈ ಕುರಿತು ಅಲ್​-ಖೈದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರಸ್ತುತ ಭಾರತದೊಂದಿಗೆ ಪಾಕಿಸ್ತಾನ ನಡೆಸುತ್ತಿರುವ ದಾಳಿಯನ್ನ “ಫಿ ಸಬಿಲಿಲ್ಲಾಹ್​” ಎಂದು ಹೇಳಿದ್ದು, ದೇವರ ಮಾರ್ಗದಲ್ಲಿ ಮುಸ್ಲಿಮರು ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲಾಹನ ವಾಕ್ಯವನ್ನು ಎತ್ತಿಹಿಡಿಯಲು,ಇಸ್ಲಾಂ ಮತ್ತು ಮುಸ್ಲಿಮರನ್ನು ರಕ್ಷಿಸಲು ಈ ಹೋರಾಟದಲ್ಲಿ ಭಾಗವಹಿಸುವುದು ಸಾಮಾಹಿಕ ಕರ್ತವ್ಯವಾಗಿದ್ದು. ಈ ಹೋರಾಟಕ್ಕೆ ಎಲ್ಲಾ ಮುಸ್ಲಿಮರು ಬೆಂಬಲಿಸುವಂತೆ ಒತ್ತಾಯಿಸಿದೆ.

‘ಮೇ 6 ರ ರಾತ್ರಿ, ಭಾರತ ಸರ್ಕಾರವು ಪಾಕಿಸ್ತಾನದ 6 ಸ್ಥಳಗಳ ಮೇಲೆ ಬಾಂಬ್​ ದಾಳಿ ನಡೆಸಿದೆ. ಮಸೀದಿಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇದರ ಪರಿಣಾಮ ಅನೇಕ ಮುಸ್ಲಿಂರ ಸಾವು-ನೋವು ಉಂಟಾಗಿದೆ. ಈ ದಾಳಿ ಭಾರತ ಸರ್ಕಾರದ ದೌರ್ಜನ್ಯದ ಭಾಗವೆಂದು ಅಲ್​ಖೈದ ಹೇಳಿದೆ.

ಇದನ್ನೂ ಓದಿ :ಸ್ವತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ: ರಾಯಭಾರ ಕಛೇರಿ ತೆರೆಯಲು ಭಾರತಕ್ಕೆ ಮನವಿ

ಭಾರತದ ವಿರುದ್ದ ಜಿಹಾದ್ ನಡೆಸುವಂತೆ ಕರೆ ನೀಡಿದ ಆಲ್​-ಖೈದ..!

ಆಲ್​ಖೈದ್ ಈ ಸಂಘರ್ಷವನ್ನು “ಜಿಹಾದ್ ಫಿ ಸಬಿಲಿಲ್ಲಾಹ್” (ಅಲ್ಲಾಹನ ಮಾರ್ಗದಲ್ಲಿ ಪವಿತ್ರ ಯುದ್ಧ) ಎಂದು ಘೋಷಿಸಿದ್ದು. ಮುಸ್ಲಿಮರು ಇಸ್ಲಾಂ ಧರ್ಮದ ರಕ್ಷಣೆಗಾಗಿ ಎದ್ದು ನಿಲ್ಲುವಂತೆ ಕರೆ ನೀಡಿದೆ, ಅಷ್ಟೇ ಅಲ್ಲದೇ ಭಾರತದ ವಿರುದ್ಧ ಯುದ್ಧ ಮಾಡುವುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಮುಸ್ಲಿಮರ ಮೇಲಿನ ಅನ್ಯಾಯಗಳಿಗೆ ಪ್ರತೀಕಾರ ತೀರಿಸಿಕೊಳ್ಳುವವರೆಗೆ ಮತ್ತು ಇಸ್ಲಾಮಿಕ್ ಪ್ರಾಬಲ್ಯವನ್ನು ಸ್ಥಾಪಿಸುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಲಾಗಿದೆ.

ಇದನ್ನೂ ಓದಿ :ಪಾಕ್​ ಪ್ರಧಾನಿ ಮನೆ ಬಳಿ ಮಿಸೈಲ್​​ ದಾಳಿ: ಬಂಕರ್‌ನಲ್ಲಿ ಅಡಗಿ ಕುಳಿತ ಶೆಹಬಾಜ್​ ಷರೀಫ್​..!

“ಇಸ್ಲಾಂನ ಎಲ್ಲಾ ಮುಜಾಹಿದೀನ್‌ಗಳು ಮತ್ತು ಉಪಖಂಡದ ಮುಸ್ಲಿಮರಿಗೆ, ಭಾರತದ ವಿರುದ್ಧದ ಈ ಯುದ್ಧವು ಜಿಹಾದ್ ಫಿ ಸಬಿಲಿಲ್ಲಾಹ್ ಆಗಿದೆ. ಅಲ್ಲಾಹನ ವಾಕ್ಯವನ್ನು ಎತ್ತಿಹಿಡಿಯಲು, ಇಸ್ಲಾಂ ಧರ್ಮ ಮತ್ತು ಮುಸ್ಲಿಮರನ್ನು ರಕ್ಷಿಸಲು ಮತ್ತು ಉಪಖಂಡದ ದಮನಿತ ಜನರನ್ನು ಬೆಂಬಲಿಸಲು ಈ ಹೋರಾಟದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಇಸ್ಲಾಂ ಅನ್ನು ನಿರ್ಮೂಲನೆ ಮಾಡಲು ಪ್ರಧಾನಿ ಮೋದಿ ಅಭಿಯಾನ ನಡೆಸುತ್ತಿದ್ದಾರೆ ಎಂದು ಆಲ್​ಖೈದ ಹೇಳಿದೆ.

RELATED ARTICLES

Related Articles

TRENDING ARTICLES