ದೆಹಲಿ: ಪಹಲ್ಗಾಮ್ನಲ್ಲಿ ನಡೆದ ಉಗ್ರದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನವನ್ನ ರಣಭೂಮಿಯಲ್ಲಿ ಅಟ್ಟಾಡಿಸಲು ಸಿದ್ದವಾಗಿದ್ದು. ಇದರ ಬೆನ್ನಲ್ಲೇ ಐಪಿಎಲ್ ಪಂದ್ಯಾಟವನ್ನು ಸ್ಥಗಿತಗೊಳಿಸಲಾಗಿದೆ. ಐಪಿಎಲ್ನಲ್ಲಿ ಇನ್ನು 16 ಪಂದ್ಯಾಟಗಳು ಬಾಕಿ ಉಳಿದಿದ್ದು, ಈ ಪಂದ್ಯಾಟಗಳನ್ನು ಮುಂದಿನ ವಾರದಿಂದ ಆಯೋಜನೆ ಮಾಡಲಾಗುತ್ತದೆ ಎಂದು ಮಾಹಿತಿ ದೊರೆತಿದೆ.
ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ 57 ಪಂದ್ಯಗಳನ್ನು ಆಡಲಾಗಿದೆ. ಅಂದರೆ ಇನ್ನೂ 16 ಪಂದ್ಯಗಳು ಉಳಿದಿವೆ. ಈ ಪಂದ್ಯಗಳನ್ನು ಮುಂದಿನ ವಾರದಿಂದ ನಡೆಸಲಾಗುತ್ತದೆ ಎಂದು Indian Premire League ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ:‘ಮೋದಿ ಹೆಸರೇಳಲು ಹೆದರುವ ರಣಹೇಡಿ ನಮ್ಮ ಪ್ರಧಾನಿ’: ಪಾಕ್ ಸಂಸತ್ತಿನಲ್ಲಿ ಪಾಕ್ ಪ್ರಧಾನಿ ಮಾನಭಂಗ
ಮುಂದಿನ ವಾರ ಸಾಧ್ಯವಾಗದೆ ಇದ್ದರೆ ಇದೆ ಮತ್ತೊಂದು ಆಯ್ಕೆ..!
ಐಪಿಎಲ್ ಪಂದ್ಯಾವಳಿ ಮುಗಿಯಲು ಇನ್ನು 16 ಪಂದ್ಯಗಳು ಬಾಕಿ ಇದ್ದು. ಇದಕ್ಕಾಗಿ ಸುಮಾರು ಎರಡು ವಾರಗಳ ಸಮಯ ಬೇಕಾಗುತ್ತದೆ. ಆದರೆ ನಿಗದಿತ ಐಪಿಎಲ್ ದಿನಾಂಕ ಮುಗಿದ ನಂತರ ಭಾರತಕ್ಕೆ ಕಾರ್ಯನಿರತ ವೇಳಾಪಟ್ಟಿಯಿದ್ದು. ಈ ಸಮಯದಲ್ಲಿ ಐಪಿಎಲ್ ದ್ವಿತಿಯಾರ್ಧವನ್ನು ನಡೆಸುವುದು ಚಾಲೆಂಜ್ ಆಗಿದೆ.
🚨 News 🚨
The remainder of ongoing #TATAIPL 2025 suspended with immediate effect for one week.
— IndianPremierLeague (@IPL) May 9, 2025
ಐಪಿಎಲ್ ನಂತರ ಭಾರತ ತಂಡವು ತುಂಬಾ ಕಾರ್ಯನಿರತ ವೇಳಾಪಟ್ಟಿಯನ್ನು ಹೊಂದಿದೆ. ಜೂನ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಆಗಸ್ಟ್ ವರೆಗೆ ನಡೆಯಲಿದೆ. ಇದಾದ ನಂತರ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಆಡಬೇಕಾಗುತ್ತದೆ. ಆದಾಗ್ಯೂ, ಬಾಂಗ್ಲಾದೇಶ ವಿರುದ್ಧದ ಸರಣಿ ನಡೆಯುತ್ತದೆಯೋ ಇಲ್ಲವೋ ಎಂಬುದು ಇನ್ನೂ ಸಸ್ಪೆನ್ಸ್ ಆಗಿದೆ.
ಇದನ್ನೂ ಓದಿ :India vs Pakistan War : ಫೇಕ್ ನ್ಯೂಸ್ಗಳಿಂದ ದೂರವಿರಿ; ರೋಹಿತ್ ಶರ್ಮಾ ಸಂದೇಶ
ಏಕೆಂದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ಬಿಸಿಸಿಐ ಈ ಸರಣಿಯಿಂದ ಹಿಂದೆ ಸರಿಯಬಹುದು. ಅಲ್ಲದೆ ಮುಂಬರುವ ಏಷ್ಯಾಕಪ್ನಲ್ಲೂ ಭಾರತ ಆಡುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಎರಡು ಸುದ್ದಿಗಳು ನಿಜವಾದರೆ, ಈ ಮಧ್ಯೆ ಐಪಿಎಲ್‌ನ ಉಳಿದ ಪಂದ್ಯಗಳನ್ನು ನಡೆಸಬಹುದು. ಆದರೆ ಈ ಸಮಯದಲ್ಲಿ ಇತರ ತಂಡಗಳು ಇತರ ಸರಣಿಗಳಲ್ಲಿ ನಿರತವಾಗಿರುತ್ತವೆ. ಇದರಿಂದ ಪ್ರಮುಖ ಆಟಗಾರರ ಅಲಭ್ಯತೆ ಎದುರಾಗಲಿದೆ.