ಬೆಂಗಳೂರು : ಸ್ಯಾಂಡಲ್ವುಡ್ನ ದೊಡ್ಮನೆಯ ಭರವಸೆಯ ನಟ ವಿನಯ್ ರಾಜಕುಮಾರ್ ಅವರು ಇಂದು (ಮೇ 07) ತಮ್ಮ 36ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆ ಕೇಕ್ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ.
ಇದೇ ವೇಳೆ ದೊಡ್ಮನೆ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಸದ್ಯ ವಿನಯ್ ರಾಜಕುಮಾರ್ ಅವರು ಬಹುನಿರೀಕ್ಷಿತ ಚಿತ್ರ ಅಂದೊಂದಿತ್ತು ಕಾಲ ಬಿಡುಗಡೆಗೆ ಸಿದ್ಧವಾಗಿದೆ. ಅದುವಲ್ಲದೇ ಅವರ ಗ್ರಾಮಾಯಣ ಚಿತ್ರದ ಶೂಟಿಂಗ್ ಕೂಡ ಕೊನೆಯ ಹಂತದಲ್ಲಿದೆ. ಸದ್ಯ ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್( ದುನಿಯಾ ವಿಜಯ್) ಅವರ ನಿರ್ದೇಶನದ ಸಿಟಿ ಲೈಟ್ಸ್ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇನ್ನು ಅಂದೊಂದಿತ್ತು ಕಾಲ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಮುಂದಿನ ಜೂನ್ ತಿಂಗಳಲ್ಲಿ ತೆರೆಕಣಲಿದೆ.