ವೈಶಾಖ ಶುದ್ಧ ಚತುದರ್ಶಿ ಸ್ವಾತಿ ನಕ್ಷತ್ರದಲ್ಲಿ ಪರಮ ಭಾಗವತೋತ್ತಮ ಶ್ರೀ ಪ್ರಹ್ಲಾದರ ಭಕ್ತಿಗೆ ಮೆಚ್ಚಿ ನಂಬಿ ಕೆಟ್ಟವರಿಲ್ಲವೋ ಹರಿಯ ಎಂಬ ಮಾತಿಗೆ ಕಂಬದಿಂದ ಹೊರಬಂದು ಭಗವಂತ ಭಕ್ತರಿಗೆ ದಾಸ ಎಂಬ ಕಾರುಣ್ಯದ ವಾಕ್ಯವನ್ನು ಅನುಗ್ರಹಿಸಿ ಅಹಂಕಾರದಿಂದ ತುಂಬ, ದೇವತೆಗಳಿಗೆ ಕಂಟಕನಾಗಿದ್ದ, ಅಸುರ ಸಾಮ್ರಾಟನಾದ ಹಿರಣ್ಯಕಶಿಪುವನ್ನು ಅವನ ಇಷ್ಟದಂತೆಯೇ ಸಂಹಾರವನ್ನು ಮಾಡಿ ಜೀವನ್ಮುಕ್ತಿಯನ್ನು ಅನುಗ್ರಹಿಸಿದರು. ಅಂದಿನಿಂದ ವೈಶಾಖ ಶದ್ಧ ಚತುದರ್ಶಿ (ತಾ|| 11-05-2025, ಭಾನುವಾರ) ಶ್ರೀ ಲಕ್ಮ್ಲೀನರಸಿಂಹ ಜಯಂತಿಯನ್ನು ಆಚರಿಸುತ್ತಾ ಬಂದಿದ್ದೇವೆ.