Thursday, May 8, 2025

ಟೆಸ್ಟ್​​ ಕ್ರಿಕೆಟ್​ಗೆ ವಿದಾಯ ಹೇಳಿದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ

ಟೀಂ ಇಂಡಿಯಾ ಕ್ರಿಕೆಟ್​ನಲ್ಲಿ ಹಿಟ್​ಮ್ಯಾನ್​ ಎಂದೇ ಹೆಸರಾಗಿದ್ದ ರೋಹಿತ್​ ಶರ್ಮಾ ಅವರು ತಮ್ಮ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ತಮ್ಮ ಅಧಿಕೃತ ಖಾತೆ ಇನ್​ಸ್ಟಾದಲ್ಲಿ ಎಲ್ಲರಿಗೂ ನಮಸ್ಕಾರ, ನಾನು ನಿಮ್ಮೊಟ್ಟಿಗೆ ಒಂದು ವಿಷಯ ಹಂಚಿಕೊಳ್ಳಲು ಬಯಸುತ್ತಿದ್ದೇನೆ ಅದೇನಂದ್ರೆ ನಾನು ಟೆಸ್ಟ್​​ ಕ್ರಿಕೆಟ್​ಗೆ ವಿದಾಯ ಹೇಳುತ್ತಿದ್ದೇನೆ. ವೈಟ್​​ ಬಾಲ್​ ಕ್ರಿಕೆಟ್​​ನಲ್ಲಿ ನನ್ನ ದೇಶದ ಪರ ಆಡಿರೋದಕ್ಕೆ ಹೆಮ್ಮೆ ಇದೆ. ಇಷ್ಟು ವರ್ಷ ನನಗೆ ಪ್ರೋತ್ಸಾಹಿಸಿ, ಪ್ರೀತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸದ್ಯ ನಾನು ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಫಾರ್ಮೆಟ್​​​ನಲ್ಲಿ ಮುಂದುವರಿಯುತ್ತೇನೆ ಎಂದು ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಅವರು ಇನ್​ಸ್ಟಾಗ್ರಾಂ ಸ್ಟೇಟಸ್​​ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ರೋಹಿತ್​ ಶರ್ಮಾ ಅವರು ಟಿ20 ಫಾರ್ಮೆಟ್​ಗೂ ವಿದಾಯ ಘೋಷಣೆ ಮಾಡಿದ್ದರು. ಸದ್ಯ ಈಗ ಟೆಸ್ಟ್​ ಫಾರ್ಮೆಟ್​​ಗೂ ನಿವೃತ್ತಿ ಘೋಷಣೆ ಮಾಡಿದ್ದಾರೆ.

2024 ಭಾರತ ಕ್ರಿಕೆಟ್​ ತಂಡಕ್ಕೆ ಅದೃಷ್ಟದ ವರ್ಷವೆಂದೇ ಹೇಳಲಾಗುತ್ತಿದೆ. ಕಾರಣ 17 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್​ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಜೂನ್​ ತಿಂಗಳಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್​ ಪ್ರವೇಶಿಸಿದ್ದ ಭಾರತ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಎತ್ತಿ ಹಿಡಿದಿತ್ತು.

2007ರಲ್ಲಿ ಕ್ಯಾಪ್ಟನ್​ ಕೂಲ್ ಧೋನಿ ನಾಯಕತ್ವದಲ್ಲಿ ಭಾರತ ಕಪ್ ಗೆದ್ದಿದ್ದರೇ, ಇದೀಗ 2024ರಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಇನ್ನು ಈ ಪಂದ್ಯ ಗೆಲ್ಲುತ್ತಿದ್ದಂತೆ ಹಿಂದೂಸ್ಥಾನದ ಪ್ರತಿ ಮನೆಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳಂತೂ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಿ ತಮ್ಮ ಖುಷಿ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಖುಷಿಯಲ್ಲಿರುವಾಗಲೇ ನಾಯಕ ರೋಹಿತ್ ಶರ್ಮಾ ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ದಿಢೀರ್​ ನಿವೃತ್ತಿ ಘೋಷಿಸಿ ಕ್ರೀಡಾ ಪ್ರಿಯರಿಗೆ ಶಾಕ್​ ನೀಡಿದ್ದರು. ಕಪ್ ಗೆದ್ದಿದ್ದಕ್ಕೆ ಸಂಭ್ರಮಿಸಬೇಕೋ ಅಥವಾ ಈ ಆಟಗಾರರು ನಿವೃತ್ತಿ ಘೋಷಿಸಿದ್ದಕ್ಕೆ ಬೇಸರಪಡಬೇಕೋ ಎಂದು ಗೊತ್ತಿಲ್ಲದ್ದ ಸ್ಥಿತಿಗೆ ಅಭಿಮಾನಿಗಳು ತಲುಪಿದ್ದರು.

RELATED ARTICLES

Related Articles

TRENDING ARTICLES