Sunday, May 4, 2025

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಇಬ್ಬರು ಹಿಂದೂಗಳು ಭಾಗಿ

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್​ ಶೆಟ್ಟಿ ಕೊಲೆ ಪ್ರಕರಣ ದಕ್ಷಿಣ ಕನ್ನಡದ ಸೇರಿದಂತೆ ರಾಜ್ಯದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು. ಈ ಕುರಿತು ಮಂಗಳೂರು ಪೊಲೀಸ್​ ಆಯುಕ್ತ ಅನುಪಮ್​ ಅಗರ್ವಾಲ್​ ಪತ್ರಿಕಾ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. ಸುಹಾಸ್​ ಶೆಟ್ಟಿ ಕೊಲೆಯಲ್ಲಿ ಇಬ್ಬರು ಹಿಂದೂಗಳು ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ:13 ವರ್ಷದ ವಿದ್ಯಾರ್ಥಿ ಜೊತೆ ಶಿಕ್ಷಕಿ ಪರಾರಿ: 5 ತಿಂಗಳ ಗರ್ಭಿಣಿಯಾಗಿ ಪತ್ತೆ

ಗೃಹ ಸಚಿವ ಪರಮೇಶ್ವರ್ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು. ಬಂಧಿತರ ಪೈಕಿ ಇಬ್ಬರು ಹಿಂದುಗಳು ಇರುವುದು ದೃಢಪಟ್ಟಿದೆ. ಆದರೆ, ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್ ಸುಹಾಸ್ ಕೊಲೆಗೆ ಸಂಚು ಹೂಡಿದ್ದು, 5 ಲಕ್ಷ ಫಂಡಿಂಗ್ ಮಾಡಿದ್ದಾಗಿಯೂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇನ್ನು ಆರೋಪಿಗಳಾದ 8 ಜನರನ್ನು ಬಂಧಿಸಿದ್ದು, ಬಂಧಿತರನ್ನು ಅಬ್ದುಲ್​ ಸಫ್ವಾನ್​, ನಿಯಾಜ್​, ಮೊಹಮ್ಮದ್ದ ಮುಸ್ಸಮ್ಮೀರ್​, ಕಲಂದರ್​ ಶಾಫಿ, ಆದಿಲ್​ ಮೆಫರೂಫ್​, ನಾಗರಾಜ್​, ಮೊಹ್ಹಮ್ಮದ್​ ರಿಜ್ವಾನ್​, ರಂಜಿತ್​ ಎಂದು ಗುರುತಿಸಲಾಗಿದೆ. ಇದನ್ನೂ ಓದಿ :‘ಬಾಯ್​ ಮುಚ್ಕೊಂಡಿದ್ದರೆ ಅದೇ ಈ ದೇಶಕ್ಕೆ ಮಾಡೋ ದೊಡ್ಡ ಸೇವೆ’: ಜಮೀರ್​ ಮಾತಿಗೆ ಜೋಶಿ ವ್ಯಂಗ್ಯ

ಗೃಹ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್​..!

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್‌ ಮಂಗಳೂರಲ್ಲಿ ಸಭೆ ನಡೆಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಗೃಹ ಸಚಿವರ ಜೊತೆ ಮಾತುಕತೆಗೆ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ತೆರಳಿದ್ದರು. ಪರಮೇಶ್ವರ್ ಜೊತೆ ಮಾತುಕತೆಯಲ್ಲಿ ಮೊನ್ನೆ ನಡೆದ ಗುಂಪು ಹತ್ಯೆ ವಿಚಾರ ಪ್ರಸ್ತಾಪವಾಯಿತು. ಈ ವೇಳೆ ಮುಸ್ಲಿಂ ಮುಖಂಡರು ಪರಮೇಶ್ವರ್​ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES