Saturday, May 3, 2025

ಯುವತಿಯ ಖಾಸಗಿ ಅಂಗ ಸ್ಪರ್ಷಿಸಿ ಲೈಂಗಿಕ ಕಿರುಕುಳ: ಮಹಾನಗರದಲ್ಲಿ ಇದೆಲ್ಲಾ ಕಾಮನ್​ ಅಂತಾರ ಗೃಹ ಸಚಿವರು..!

ಬೆಂಗಳೂರು : ಸುದ್ದಗುಂಟೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದು ಹೋಗ್ತಿದ್ದ ಯುವತಿಯನ್ನ ಹಿಂಬಲಿಸಿದ ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಘಟನೆಯ ದೃಷ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು. ಸೋಷಿಯಲ್​ ಮಿಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

ಕಳೆದ ಕೆಲವಾರಗಳ ಹಿಂದೆ ಇದೇ ಸದ್ದುಗುಂಟೆ ಪಾಳ್ಯದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಜೊತೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಇದೇ ಮಾದರಿಯಲ್ಲಿ ಘಟನೆ ನಡೆದಿದೆ. ಹೌದು ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಕೋ ವರ್ಲ್ಡ್ ಮುಂಭಾಗ ನಡೆದುಕೊಂಡು ಹೋಗ್ತಿದ್ದ ಯುವತಿಯ ಹಿಂಭಾಗಕ್ಕೆ ಹೊಡೆದು ವಿಕೃತಿ ಮೆರೆದಿದ್ದಾನೆ.

ಇದನ್ನೂ ಓದಿ :ಮೊಘಲರಿಂದ ಮುಸ್ಲಿಂ ಧರ್ಮ ಸ್ವೀಕರಿಸಿದ್ದ ಕುಟುಂಬ ಮಥುರಾದಲ್ಲಿ ಹಿಂದೂ ಧರ್ಮಕ್ಕೆ ಮತಾಂತರ

ಇದೇ ಬುಧವಾರ(ಏ.30) ರಾತ್ರಿ 11.30ರ ವೇಳೆಗೆ ಕೆಲಸ ಮುಗಿಸಿಕೊಂಡು ಯುವತಿ ಇಕೋ ವರ್ಲ್ಡ್ ಗೇಟ್ ಮುಂಭಾಗ ಹೋಗ್ತಿದ್ಲು. ಆದ್ರೆ ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬೈಕ್ ನಲ್ಲಿ ಸ್ಪೀಡ್ ಆಗಿ ಬಂದ ಪುಂಡ ಯುವತಿಯ ಹಿಂಭಾಗಕ್ಕೆ ಜೋರಾಗಿ ಹೊಡೆದಿದ್ದಾನೆ .ಆ ಬಳಿಕ ಮತ್ತೆ ಮುಂದೆ ಹೋಗಿ ಪುನ: ಯುವತಿ ಬಳಿ ಬಂದು ಮತ್ತೊಮ್ಮೆ ಹಿಂಭಾಗಕ್ಕೆ ಹೊಡೆದು ವಿಕೃತಿ ಮೆರೆದಿದ್ದಾನೆ.

ಇದೇ ವೇಳೆ ಯುವತಿ ದೂರದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನ ಸಹಾಯ ಕೇಳಿದ್ದು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ‌. ಉತ್ತರ ಭಾರತ ಮೂಲದ ಯುವತಿ ಇಕೋ ವರ್ಲ್ಡ್ ನಲ್ಲಿರೋ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು. ರಾತ್ರಿ ಕೆಲಸ ಮುಗಿಸಿ ಹೋಗುವಾಗ ಪುಂಡನ ವರ್ತನೆಗೆ ಬೇಸತ್ತಿದ್ದಾಳೆ.

ಇದನ್ನೂ ಓದಿ:ಸರ್ಜಿಕಲ್​ ಸ್ಟ್ರೈಕ್ ಮಾಡೋದು ಬಿಟ್ಟು, ಯೂಟ್ಯೂಬ್​ ಚಾನೆಲ್​ ಬ್ಯಾನ್​ ಮಾಡ್ತಾವ್ರೆ: ಪ್ರಿಯಾಂಕ್​ ಖರ್ಗೆ

ಇನ್ನು ಸಂತ್ರಸ್ಥ ಯುವತಿ ಮಾರತ್ ಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಆರೋಪಿಯ ಸುಳಿವು ಪತ್ತೆ ಆಗಿಲ್ಲ ಎಂದು ತಿಳಿದು ಬಂದಿದ್ದು. ಪೊಲೀಸರು ಆದಷ್ಟು ಬೇಗ ಇಂತಹ ವಿಕೃತ ಕಾಮಿಗಳನ್ನು ಬಂಧಿಸುವಂತೆ ಆಗ್ರಹ ಕೇಳಿಬಂದಿದೆ.

ಕೆಲವಾರಗಳ ಹಿಂದೆಯೂ ಸದ್ದುಗುಂಟೆ ಪಾಳ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಖಾಸಗಿ ಅಂಗ ಸ್ಪರ್ಷಿಸಿ ಕಿರುಕುಳ ನೀಡಲಾಗಿತ್ತು. ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಪರಮೇಶ್ವರ್​ ‘ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂಬ ಬೇಜವಬ್ದಾರಿ ಹೇಳಿಕೆ ನೀಡಿದ್ದರು. ಇದಕ್ಕೆ ರಾಷ್ಟ್ರದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಇಂತಹ ಘಟನೆ ಮರುಕಳಿಸಿದ್ದು. ಈ ಬಾರಿ ಗೃಹ ಸಚಿವರು ಅದೇನೂ ಹೇಳುತ್ತಾರೋ ಏನೋ..!

RELATED ARTICLES

Related Articles

TRENDING ARTICLES